×
Ad

ರಾಜಾ ರಾಮ್ ಮೋಹನ್ ರಾಯ್ ಅವರನ್ನು ‘ಬ್ರಿಟೀಷರ ಏಜೆಂಟ್’ ಎಂದು ಕರೆದು, ಬಳಿಕ ಕ್ಷಮೆ ಕೋರಿದ ಬಿಜೆಪಿ ಸಚಿವ

Update: 2025-11-16 22:10 IST

ಇಂದರ್ ಸಿಂಗ್ ಪರಮಾರ್ | Photo Credit : NDTV 

ಶಾಜಾಪುರ, ನ. 16: ಮಧ್ಯಪ್ರದೇಶದ ಸಚಿವ ಹಾಗೂ ಬಿಜೆಪಿ ನಾಯಕ ಇಂದರ್ ಸಿಂಗ್ ಪರಮಾರ್ ಸಮಾಜ ಸುಧಾರಕ ರಾಜಾ ರಾಮ್ ಮೋಹನ್ ರಾಯ್ ಅವರನ್ನು ಬ್ರಿಟೀಷರ ಏಜೆಂಟ್ ಎಂದು ಕರೆಯುವ ಮೂಲಕ ವಿವಾದಕ್ಕೆ ಒಳಗಾಗಿದ್ದಾರೆ.

ರಾಜಾ ರಾಮ್ ಮೋಹನ್ ರಾಯ್ ಅವರು ‘‘ಮತಾಂತರದ ವಿಷ ವರ್ತುಲ’’ ಆರಂಭಿಸಿದ್ದರು ಎಂದು ಅವರು ಹೇಳಿದ್ದರು.

ಈ ಹೇಳಿಕೆ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಅವರು ರವಿವಾರ ಕ್ಷಮೆ ಯಾಚಿಸಿದ್ದಾರೆ. ತಾನು ಬಾಯ್ತಪ್ಪಿ ಈ ಹೇಳಿಕೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಬುಡಕಟ್ಟು ಜನರ ಮಹಾ ನಾಯಕ ಬಿರ್ಸಾ ಮುಂಡಾ ಅವರ 150ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಅಗರ್ ಮಾಲ್ವ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪರಮಾರ್ ಅವರು ರಾಜ ರಾಮ್ ಮೋಹನ್ ರಾಯ್ ಅವರು ಬ್ರಿಟೀಷ್ ಏಜೆಂಟ್ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು. ‘‘ರಾಜಾ ರಾಮ್ ಮೋಹನ್ ರಾಯ್ ಅವರು ದೇಶದಲ್ಲಿ ಬ್ರಿಟೀಷರ ಏಜೆಂಟ್ ಆಗಿ ಕೆಲಸ ಮಾಡಿದರು ಹಾಗೂ ಮತಾಂತರದ ವಿಷ ವರ್ತುಲವನ್ನು ಆರಂಭಿಸಿದರು’’ ಎಂದು ತನ್ನ ಭಾಷಣದಲ್ಲಿ ಹೇಳಿದ್ದರು.

ಬ್ರಿಟೀಷರು ಹಲವು ಜನರನ್ನು ನಕಲಿ ಸಾಮಾಜ ಸುಧಾರಕರು ಎಂದು ಬಿಂಬಿಸಿದರು ಹಾಗೂ ಮತಾಂತರ ಪ್ರೋತ್ಸಾಹಿಸಿದವರನ್ನು ಉತ್ತೇಜಿಸಿದರು ಎಂದು ಅವರು ಪ್ರತಿಪಾದಿಸಿದ್ದರು.

‘‘ಇದನ್ನು ನಿಲ್ಲಿಸಿ ಬುಡಕಟ್ಟು ಜನರನ್ನು ರಕ್ಷಿಸುವ ಧೈರ್ಯ ತೋರಿದ್ದು ಬಿರ್ಸಾ ಮುಂಡಾ ಅವರು ಮಾತ್ರ’’ ಎಂದು ಅವರು ಹೇಳಿದ್ದರು. ಬ್ರಿಟೀಷ್ ಆಡಳಿತದ ಸಂದರ್ಭ ಮಿಷನರಿ ಶಾಲೆಗಳು ಮಾತ್ರ ಶಿಕ್ಷಣ ಸಂಸ್ಥೆಗಳಾಗಿದ್ದವು ಹಾಗೂ ಮತಾಂತರವನ್ನು ಮರೆ ಮಾಚಲು ಶಿಕ್ಷಣವನ್ನು ಬಳಸಲಾಗುತ್ತಿತ್ತು ಎಂದು ಅವರು ಹೇಳಿದ್ದರು.

ರಾಯ್ ಕುರಿತ ಹೇಳಿಕೆ ತೀವ್ರ ಟೀಕಿಗೆ ಗುರಿಯಾದ ಬಳಿಕ ಪರ್ಮಾರ್ ವೀಡಿಯೊ ಹೇಳಿಕೆಯಲ್ಲಿ, ‘‘ರಾಜಾ ರಾಮ್ ಮೋಹನ್ ರಾಯ್ ಅವರು ಸಮಾಜ ಸುಧಾರಕರು. ಅವರಿಗೆ ಗೌರವ ನೀಡಬೇಕು. ನಾನು ಬಾಯ್ತಪ್ಪಿ ಈ ಹೇಳಿಕೆ ನೀಡಿದ್ದೇನೆ. ನನಗೆ ಈ ಬಗ್ಗೆ ವಿಷಾದವಿದೆ. ನಾನು ಇದಕ್ಕೆ ಕ್ಷಮೆ ಯಾಚಿಸುತ್ತೇನೆ ’’ ಎಂದು ಹೇಳಿದ್ದಾರೆ.

ಚಾರಿತ್ರಿಕ ನಾಯಕರನ್ನು ಅವಮಾನಿಸುವ ಉದ್ದೇಶವನ್ನು ತಾನು ಹೊಂದಿಲ್ಲ ಎಂದು ಪರ್ಮಾರ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News