×
Ad

ತಳ್ಳಾಟದಲ್ಲಿ ಬಿಜೆಪಿ ಸಂಸದರಿಗೆ ಗಾಯ | ರಾಹುಲ್ ಗಾಂಧಿ ವಿರುದ್ಧ ದೂರು ನೀಡಲಿರುವ ಬಿಜೆಪಿ

Update: 2024-12-19 14:34 IST

ರಾಹುಲ್ ಗಾಂಧಿ | PC : NDTV  

ಹೊಸದಿಲ್ಲಿ: ಗೃಹ ಸಚಿವ ಅಮಿತ್ ಶಾ ಅವರ "ಅಂಬೇಡ್ಕರ್" ಹೇಳಿಕೆಗೆ ಸಂಬಂಧಿಸಿದಂತೆ ಪ್ರತಿಭಟನೆಯ ಬಳಿಕ ಈಗ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಐಟಿ ಸೆಲ್ ದೂರು ನೀಡಲು ಮುಂದಾಗಿದೆ ಎಂದು ವರದಿಯಾಗಿದೆ.

ಪ್ರತಿಭಟನೆಯ ವೇಳೆ ರಾಹುಲ್ ಗಾಂಧಿ ತಳ್ಳಾಡಿದ್ದರಿಂದ ಬಿಜೆಪಿ ಸಂಸದರಾದ ಪ್ರತಾಪ್ ಸಾರಂಗಿ, ಮುಖೇಶ್ ರಜಪೂತ್ ಗೆ ಗಾಯಗಳಾಗಿದೆ ಎಂದು ಬಿಜೆಪಿ ಆರೋಪಿಸಲಾಗಿದೆ.

ಬಿಜೆಪಿಯ ಇಬ್ಬರು ಸಂಸದರಾದ ಪ್ರತಾಪ್ ಸಾರಂಗಿ ಮತ್ತು ಮುಖೇಶ್ ರಜಪೂತ್ - ರಾಹುಲ್ ಗಾಂಧಿಯಿಂದ "ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

"... ಅವರು ಸಂಸತ್ತಿನಲ್ಲಿ ಬಲ ಪ್ರಯೋಗಿಸುತ್ತಾರೆ. ಯಾವ ಕಾನೂನಿನ ಅಡಿಯಲ್ಲಿ ಇತರ ಸಂಸದರ ಮೇಲೆ ದೈಹಿಕವಾಗಿ ಹಲ್ಲೆ ಮಾಡಲು ಅವರಿಗೆ ಅಧಿಕಾರವಿದೆ?" ಎಂದು ಅವರು ಪ್ರಶ್ನಿಸಿದ್ದಾರೆ.

"ನೀವು ಇತರ ಸಂಸದರನ್ನು ಸೋಲಿಸಲು ಕರಾಟೆ, ಕುಂಗ್ ಫೂ ಕಲಿತಿದ್ದೀರಾ?" ಎಂದು ಜಪಾನಿನ ಸಮರ ಕಲೆಯಾದ ಐಕಿಡೋದಲ್ಲಿ ಬ್ಲಾಕ್‌ ಬೆಲ್ಟ್ ಹೊಂದಿರುವ ರಾಹುಲ್ ಗಾಂಧಿಯನ್ನು ವ್ಯಂಗ್ಯಾತ್ಮಕವಾಗಿ ಸಚಿವ ರಿಜಿಜು ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News