×
Ad

‘ಒಂದು ದೇಶ, ಒಂದು ಚುನಾವಣೆ’ ಮಸೂದೆ ಮಂಡನೆ: ಮತದಾನಕ್ಕೆ ಗೈರುಹಾಜರಾಗಿದ್ದ 20 ಸಂಸದರಿಗೆ ಬಿಜೆಪಿ ನೋಟಿಸ್

Update: 2024-12-17 20:46 IST

PC : PTI

ಹೊಸದಿಲ್ಲಿ: ‘ಒಂದು ದೇಶ,ಒಂದು ಚುನಾವಣೆ’ ಮಸೂದೆ ಮಂಡನೆ ಮೇಲೆ ಮತದಾನಕ್ಕೆ ಗೈರುಹಾಜರಾಗಿದ್ದ ತನ್ನ 20 ಸಂಸದರಿಗೆ ಬಿಜೆಪಿ ನೋಟಿಸ್‌ಗಳನ್ನು ಹೊರಡಿಸಲಿದೆ ಎಂದು ವರದಿಯಾಗಿದೆ.

ಬಿಜೆಪಿ ಮಂಗಳವಾರ ಸದನದಲ್ಲಿ ಉಪಸ್ಥಿತರಿರುವಂತೆ ಸೂಚಿಸಿ ತನ್ನೆಲ್ಲ ಲೋಕಸಭಾ ಸದಸ್ಯರಿಗೆ ಮೂರು ಸಾಲುಗಳ ಸಚೇತಕಾಜ್ಞೆಯನ್ನು ಹೊರಡಿಸಿತ್ತು.

ಕೇಂದ್ರ ಕಾನೂನು ಸಚಿವ ಅರ್ಜುನ ರಾಮ ಮೇಘ್ವಾಲ್ ಅವರು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಿಕ ಚುನಾವಣೆಗಳಿಗೆ ಮಾರ್ಗ ಸುಗಮಗೊಳಿಸುವ ಸಂವಿಧಾನ(129ನೇ ತಿದ್ದುಪಡಿ) ಮಸೂದೆಯನ್ನು ಸದನದಲ್ಲಿ ಮಂಡಿಸಿದ್ದು,ಮತದಾನದ ಬಳಿಕ 269 ಸದಸ್ಯರು ಮಸೂದೆಯ ಪರವಾಗಿ ಮತ್ತು 198 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News