×
Ad

Mumbai | ಬಿಜೆಪಿಯ ರಿತು ತಾವ್ಡೆ ಮುಂಬೈ ಮೇಯರ್; ಶಿವಸೇನೆಯ ಸಂಜಯ್ ಶಂಕರ್ ಘಡಿ ಉಪ ಮೇಯರ್

Update: 2026-02-07 11:59 IST

Ritu Tawde | Photo: NDTV

ಮುಂಬೈ: ಬಿಜೆಪಿಯ ರಿತು ತಾವ್ಡೆ ಅವರನ್ನು ಮುಂಬೈ ಮೇಯರ್ ಆಗಿ ನೇಮಕ ಮಾಡಲಾಗಿದ್ದು, 25 ವರ್ಷಗಳ ಬಳಿಕ ಇದೇ ಪ್ರಥಮ ಬಾರಿಗೆ ಶಿವಸೇನೆಯೇತರ ಪಕ್ಷದ ನಾಯಕರೊಬ್ಬರು ಈ ಹುದ್ದೆಯನ್ನು ಅಲಂಕರಿಸಲಿದ್ದಾರೆ.

ಮುಂಬೈನ ಉಪ ಮೇಯರ್ ಆಗಿ ದಹಿಸಾರ್‌ನಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾಗಿರುವ ಶಿವಸೇನೆಯ ಸಂಜಯ್ ಶಂಕರ್ ಘಡಿ ನೇಮಕವಾಗಿದ್ದಾರೆ.

ಬಿಜೆಪಿಯ ಹಿರಿಯ ಕಾರ್ಪೊರೇಟರ್ ಆದ ರಿತು ತಾವ್ಡೆ 2017ರಲ್ಲಿ ಘಾಟ್ಕೋಪಾರ್‌ನ 121ನೇ ವಾರ್ಡ್‌ನಿಂದ ಕಾರ್ಪೊರೇಟರ್ ಆಗಿ ಚುನಾಯಿತರಾಗಿದ್ದರು. ಅವರು ಬೃಹನ್ ಮುಂಬೈ ನಗರ ಪಾಲಿಕೆಯ ಶಿಕ್ಷಣ ಸಮಿತಿಯ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News