ಲುಫ್ಥಾನ್ಸ ವಿಮಾನಕ್ಕೆ ಬಾಂಬ್ ಬೆದರಿಕೆ; ಹೈದರಾಬಾದ್ನಲ್ಲಿ ಇಳಿಯಬೇಕಿದ್ದ ವಿಮಾನ ಜರ್ಮನಿಗೆ ವಾಪಸ್
PC : lufthansa.com
ಹೈದರಾಬಾದ್: ಜರ್ಮನಿಯಿಂದ ಗೆ ಬರುತ್ತಿದ್ದ ಲುಫ್ಥಾನ್ಸ ಸಂಸ್ಥೆಯ ವಿಮಾನವನ್ನು ಗುರಿ ಮಾಡಿಸಿಕೊಂಡು ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು, ವಿಮಾನವು ವಾಯುಮಾರ್ಗ ಮಧ್ಯೆಯೇ ಹಿಂತಿರುಗಿ ಹೋಗಿರುವುದಾಗಿ ಹೈದರಾಬಾದ್ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನವು ಇನ್ನೂ ಭಾರತೀಯ ವಾಯುಪ್ರದೇಶದ ಹೊರಗಿರುವಾಗಲೇ ಬಾಂಬ್ ಬೆದರಿಕೆ ಬಂದಿದೆ ಎಂದು ಅವರು ಹೇಳಿದರು.
ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಬಾಂಬ್ ಬೆದರಿಕೆ ಮೌಲ್ಯಮಾಪನ ಸಮಿತಿಯನ್ನು ರಚಿಸಿ, ಕಾರ್ಯಸೂಚಿ (SOP) ಪ್ರಕಾರ ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸಲಾಯಿತು. ಸುರಕ್ಷತೆಯ ಹಿತದೃಷ್ಟಿಯಿಂದ, ವಿಮಾನಯಾನ ಸಂಸ್ಥೆಗೆ ಮೂಲ ಸ್ಥಳಕ್ಕೆ ಅಥವಾ ಹತ್ತಿರದ ಸೂಕ್ತವಾದ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲು ಸೂಚಿಸಲಾಯಿತು ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ವರದಿ ಮಾಡಿದೆ.
ಜರ್ಮನಿಯ ಫ್ರಾಂಕ್‌ಫರ್ಟ್‌ನಿಂದ ಬರುತ್ತಿದ್ದ ಲುಫ್ಥಾನ್ಸ ವಿಮಾನಕ್ಕೆ ರವಿವಾರ ಭಾರತದಲ್ಲಿ ಇಳಿಯಲು ಅನುಮತಿ ಇಲ್ಲ ಎಂದು ತಿಳಿಸಲಾಗಿದ್ದು, ಅದು ಆಕಾಶ ಮಾರ್ಗ ಮಧ್ಯೆಯೇ ಹಿಂತಿರುಗಿದೆ.
ಬೋಯಿಂಗ್ 787-9 ಡ್ರೀಮ್‌ಲೈನರ್ LH752 ವಿಮಾನವು ರವಿವಾರ ಸ್ಥಳೀಯ ಸಮಯ 14.14 ರ ಸುಮಾರಿಗೆ ಜರ್ಮನಿಯಿಂದ ಹೊರಟಿದ್ದು, ಸೋಮವಾರ ಮುಂಜಾನೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಆದರೆ, ಹಾರಾಟವಾದ ಕೆಲವು ಗಂಟೆಗಳಲ್ಲಿ ವಿಮಾನವು ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣಕ್ಕೆ ಹಿಂತಿರುಗಿ ಹೋಗಿದೆ.