×
Ad

ಭಾರತದ ವಿವಿಐಪಿ ವಿಮಾನ ನಿರಾಕರಿಸಿದ ಕೆನಡಾ ಪ್ರಧಾನಿ

Update: 2023-09-13 08:59 IST

ನವದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರನ್ನು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಬೀಳ್ಕೊಟ್ಟರು.

Photo: twitter.com/MeghUpdates

ಹೊಸದಿಲ್ಲಿ: ಭಾರತಕ್ಕೆ ಜಿ20 ಶೃಂಗಸಭೆಗಾಗಿ ಕೆಡನಾ ಪ್ರಧಾನಿ  ಜಸ್ಟಿನ್ ಟ್ರುಡೋ ಮತ್ತು ಅವರ ನಿಯೋಗ ಆಗಮಿಸಿದ್ದ ಏರ್ ಬಸ್ ಎ310 ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣದಿಂದ 36 ಗಂಟೆಗಳ ಕಾಲ ಅತಂತ್ರವಾಗಿ ಉಳಿದರೂ, ಅವರ ಪ್ರಯಾಣಕ್ಕಾಗಿ ಭಾರತ ನೀಡಲು ಮುಂದಾಗಿದ್ದ ವಿವಿಐಪಿ ವಿಮಾನವನ್ನು ಕೆನಡಾ ಪ್ರಧಾನಿ ನಿರಾಕರಿಸಿದ ಅಂಶ ಇದೀಗ ಬೆಳಕಿಗೆ ಬಂದಿದೆ.

ಭಾರತದ ಕೊಡುಗೆಯನ್ನು ತಿರಸ್ಕರಿಸಿದ ಕೆನಡಾ ಪ್ರಧಾನಿ ಹಾಗೂ ಅವರ ನಿಯೋಗ ತಾವು ಆಗಮಿಸಿದ್ದ ವಿಮಾನ ದುರಸ್ತಿಯಾಗಿ ಪ್ರಯಾಣಕ್ಕೆ ಯೋಗ್ಯವಾದ ಬಳಿಕ ಮಂಗಳವಾರ ಸಂಜೆ ಅದರಲ್ಲೇ ಸ್ವದೇಶಕ್ಕೆ ಪ್ರಯಾಣ ಬೆಳೆಸಿದೆ.

ಸಿಂಗಾಪುರದಿಂದ ಸೆಪ್ಟೆಂಬರ್ 8ರಂದು ಟ್ರುದೇವ್ ಅವರನ್ನು ಭಾರತಕ್ಕೆ ಕರೆ ತಂದ ವಿಮಾನ ಜಿ20 ಶೃಂಗ ಸಭೆ ಕೊನೆಗೊಂಡ ಬಳಿಕ ಭಾನುವಾರ ರಾತ್ರಿ ರೋಮ್ ಮಾರ್ಗವಾಗಿ ಒಟ್ಟಾವಕ್ಕೆ ತೆರಳಲು ಉದ್ದೇಶಿಸಿತ್ತು. ಆದರೆ ವಿಮಾನ ನಿರ್ಗಮನಕ್ಕೆ ಮುನ್ನ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಮಾನಯಾನ ವಿಳಂಬವಾಗಿತ್ತು.

ಉಭಯ ರಾಷ್ಟ್ರಗಳ ನಡುವೆ ಖಲಿಸ್ತಾನ ವಿಚಾರವಾಗಿ ಉತ್ತಮ ಬಾಂಧವ್ಯ ಇಲ್ಲದಿದ್ದರೂ ಅತಿಥೇಯ ರಾಷ್ಟ್ರವಾಗಿ ಭಾರತವು ಟ್ರುದೇವ್ ಅವರು ಮರಳಲು ವಿವಿಐಪಿ ವಿಮಾನ ಒದಗಿಸಲು ಮುಂದಾಗಿತ್ತು. ಕೆನಡಾ ಪರ್ಯಾಯ ವಿಮಾನವನ್ನು ಕಳುಹಿಸಿಕೊಟ್ಟರೂ, ದೆಹಲಿಯಲ್ಲಿ ಏರ್ಬಸ್ ಎ310 ದುರಸ್ತಿಯಾದ ಕಾರಣ ಅದು ಅಗತ್ಯವಿಲ್ಲ ಎಂಬ ಕಾರಣಕ್ಕೆ ಲಂಡನ್ಗೆ ತೆರಳಲು ಸೂಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News