×
Ad

ಪ್ರಶ್ನೆಗಾಗಿ ನಗದು ಪ್ರಕರಣ | ಲೋಕಪಾಲ್ ಆದೇಶದ ವಿರುದ್ಧ ಮಹುವಾ ಮೊಯಿತ್ರಾ ಸಲ್ಲಿಸಿರುವ ಅರ್ಜಿಗೆ ಸಿಬಿಐ ವಿರೋಧ

Update: 2025-11-21 20:17 IST

ಮಹುವಾ ಮೊಯಿತ್ರಾ | Photo Credit : PTI 

ಹೊಸ ದಿಲ್ಲಿ: ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ತಮ್ಮ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲು ಅವಕಾಶ ನೀಡಿರುವ ಲೋಕಪಾಲ್ ಆದೇಶವನ್ನು ಪ್ರಶ್ನಿಸಿ ದಿಲ್ಲಿ ಹೈಕೋರ್ಟ್ ನಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಸಲ್ಲಿಸಿರುವ ಮೇಲ್ಮನವಿಯನ್ನು ಸಿಬಿಐ ವಿರೋಧಿಸಿದೆ.

ಲೋಕಪಾಲ್ ವಿಚಾರಣೆಯ ವೇಳೆ ದಾಖಲೆಗಳನ್ನು ಸಲ್ಲಿಸುವ ಅಧಿಕಾರ ಮಹುವಾ ಮೊಯಿತ್ರಾರಿಗಿರಲಿಲ್ಲ ಹಾಗೂ ಅವರು ಕೇವಲ ತಮ್ಮ ಪ್ರತಿಕ್ರಿಯೆಗಳನ್ನು ನೀಡಬಹುದಾಗಿತ್ತೇ ಹೊರತು, ಮೌಖಿಕ ವಿಚಾರಣೆಯಲ್ಲೂ ಪಾಲ್ಗೊಳ್ಳುವಂತಿರಲಿಲ್ಲ ಎಂದು ಸಿಬಿಐ ವಾದಿಸಿದೆ.

“ಹೀಗಿದ್ದೂ, ಲೋಕಪಾಲ್ ಅವರ ಮೌಖಿಕ ವಿಚಾರಣೆ ನಡೆಸಿತು. ನಂತರ, ಈ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ಲೋಕಪಾಲ್ ಅನುಮತಿ ನೀಡಿತು” ಎಂದು ಸಿಬಿಐ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ನ್ಯಾ. ಅನಿಲ್ ಕ್ಷೇತ್ರಪಾಲ್ ಮತ್ತು ನ್ಯಾ. ಹರೀಶ್ ವೈದ್ಯನಾಥನ್ ಅವರನ್ನೊಳಗೊಂಡ ನ್ಯಾಯಪೀಠದ ಗಮನಕ್ಕೆ ತಂದರು.

ಮಹುವಾ ಮೊಯಿತ್ರಾ ಉದ್ಯಮಿಯೊಬ್ಬರಿಂದ ನಗದು ಪಡೆದು, ಅದರ ಬದಲಿಗೆ ಸದನದಲ್ಲಿ ಪ್ರಶ್ನೆ ಕೇಳಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಾಗಿ ನಗದು ಪ್ರಕರಣ ದಾಖಲಾಗಿದೆ.

ಉಭಯ ವಾದಿಗಳ ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ಮಹುವಾ ಮೊಯಿತ್ರಾರ ಮೇಲ್ಮನವಿಗೆ ಸಂಬಂಧಿಸಿದಂತೆ ತನ್ನ ತೀರ್ಪನ್ನು ಕಾಯ್ದಿರಿಸಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News