ನಿರ್ಲಕ್ಷ್ಯದ ಚಾಲನೆಯ ಆರೋಪ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಬೆಂಗಾವಲು ಪಡೆಯ ಚಾಲಕನ ಬಂಧನ
Photo: PTI
ಹೊಸದಿಲ್ಲಿ: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಬೆಂಗಾವಲು ಪಡೆಯ ಚಾಲಕನನ್ನು ನಿರ್ಲಕ್ಷ್ಯದ ಚಾಲನೆಯ ಆರೋಪದ ಮೇಲೆ ಶನಿವಾರ ದಿಲ್ಲಿಯಲ್ಲಿ ಬಂಧಿಸಲಾಯಿತು. ನಂತರ ಆತನನ್ನು ಬಿಡುಗಡೆ ಮಾಡಲಾಯಿತು ಎಂದು ಮೂಲಗಳು ತಿಳಿಸಿವೆ.
ಹೊಸದಿಲ್ಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿರುವುದರಿಂದ ಯುಎಇ ಅಧ್ಯಕ್ಷ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ತಂಗಿದ್ದ ತಾಜ್ ಹೋಟೆಲ್ ಗೆ ಅಮೆರಿಕ ಅಧ್ಯಕ್ಷರ ಬೆಂಗಾವಲು ಪಡೆಯಿಂದ ಬಂದ ಕಾರು ಪ್ರವೇಶಿಸಿದ ನಂತರ ಈ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಕಾರಿನಲ್ಲಿ ಹಲವು ಸ್ಟಿಕ್ಕರ್ಗಳು ಇರುವುದನ್ನು ಗಮನಿಸಿದ ಸ್ಥಳದಲ್ಲಿದ್ದ ಭದ್ರತಾ ಅಧಿಕಾರಿಗಳು ಸಂದೇಶ ರವಾನಿಸಿದರು.
ಬೈಡನ್ ತಂಗಿದ್ದ ಐಟಿಸಿ ಮೌರ್ಯಕ್ಕೆ ಬೆಳಿಗ್ಗೆ 9.30 ಕ್ಕೆ ಬರಬೇಕಿತ್ತು ಎಂದು ವಿಚಾರಣೆಯ ವೇಳೆ ಕಾರಿನ ಚಾಲಕನು ಹೇಳಿದ್ದಾನೆ
ಆದಾಗ್ಯೂ, ಲೋಧಿ ಎಸ್ಟೇಟ್ ಪ್ರದೇಶದಿಂದ ಬಂದ ಉದ್ಯಮಿಯನ್ನು ತಾಜ್ ಗೆ ಬಿಡಬೇಕಾಗಿದ್ದರಿಂದ ತಾಜ್ ಗೆ ಬಂದಿರುವುದಾಗಿ ಚಾಲಕ ಹೇಳಿದ್ದಾನೆ.
ತನಗೆ ಪ್ರೋಟೋಕಾಲ್ ಬಗ್ಗೆ ತಿಳಿದಿರಲಿಲ್ಲ ಎಂದು ಚಾಲಕನು ಹೇಳಿದ್ದಾನೆ.
ಬೆಂಗಾವಲು ಪಡೆಯಿಂದ ಕಾರನ್ನು ಹೊರತೆಗೆದ ಭದ್ರತಾ ಅಧಿಕಾರಿಗಳು ವಿಚಾರಣೆ ನಡೆಸಿದ ನಂತರ ಚಾಲಕನನ್ನು ಬಿಡುಗಡೆ ಮಾಡಿದರು.