×
Ad

ಬಾಂಗ್ಲಾ ಅಕ್ರಮ ವಲಸಿಗರ ಮಕ್ಕಳಿಗೆ ಬುಡಕಟ್ಟು ಹಕ್ಕುಗಳನ್ನು ನೀಡಲಾಗುವುದಿಲ್ಲ: ಜೆ.ಪಿ. ನಡ್ಡಾ

Update: 2024-11-09 23:28 IST

ಜಗತ್ ಪ್ರಸಾದ್ ನಡ್ಡಾ | PC : PTI

ರಾಂಚಿ: ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಕ್ರಮ ವಲಸಿಗ ತಂದೆ ಮತ್ತು ಸ್ಥಳೀಯ ಆದಿವಾಸಿ ತಾಯಿಗೆ ಹುಟ್ಟಿದ ಮಕ್ಕಳಿಗೆ ಬುಡಕಟ್ಟು ಹಕ್ಕುಗಳನ್ನು ನೀಡಲಾಗುವುದಿಲ್ಲ ಎಂದು ಪಕ್ಷದ ಅಧ್ಯಕ್ಷ ಜಗತ್ ಪ್ರಸಾದ್ ನಡ್ಡಾ ಶನಿವಾರ ಹೇಳಿದ್ದಾರೆ.

ರಾಜ್ಯದ ಪಲಮು ಜಿಲ್ಲೆಯ ಬಿಶ್ರಮ್‌ಪುರ ಎಂಬಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ನಡ್ಡಾ, ಜೆಎಮ್‌ಎಮ್ ನೇತೃತ್ವದ ಸರಕಾರವು ಬಾಂಗ್ಲಾದೇಶಿ ರಾಷ್ಟ್ರೀಯರಿಗೆ ಆಶ್ರಯ ನೀಡಿದೆ ಎಂದು ಆರೋಪಿಸಿದರು ಮತ್ತು ಅವರನ್ನು ಹೊರಹಾಕಲಾಗುವುದು ಎಂದು ಹೇಳಿದರು.

‘‘ಭ್ರಷ್ಟರು ಮತ್ತು ಕಳ್ಳರು’’ ರಾಜ್ಯದ ಜೆಎಮ್‌ಎಮ್ ನೇತೃತ್ವದ ಸರಕಾರದ ಭಾಗವಾಗಿದ್ದಾರೆ ಎಂದು ಅವರು ಆರೋಪಿಸಿದರು.

‘‘ಸಿಂಗಲ್ ಎಂಜಿನ್ ಸರಕಾರವನ್ನು ಜಾರ್ಖಂಡ್‌ನಿಂದ ಹೊರದಬ್ಬಿ, ಸರ್ವಾಂಗೀಣ ಬೆಳವಣಿಗೆಗಾಗಿ ಡಬಲ್ ಎಂಜಿನ್ ಸರಕಾರವನ್ನು ಮರುಸ್ಥಾಪಿಸುವ ಸಮಯ ಬಂದಿದೆ’’ ಎಂದು ಬಿಜೆಪಿ ಅಧ್ಯಕ್ಷ ಹೇಳಿದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News