×
Ad

ಬಾಲಾಸೋರ್‌ | ಎರಡು ಗುಂಪುಗಳ ನಡುವೆ ಘರ್ಷಣೆ; ಕೆಲ ಭಾಗಗಳಲ್ಲಿ ಕರ್ಫ್ಯೂ ಹೇರಿಕೆ

Update: 2024-06-18 11:14 IST

ಸಾಂಧರ್ಬಿಕ ಚಿತ್ರ : PTI

ಬಾಲಾಸೋರ್:‌ ಎರಡು ಗುಂಪುಗಳ ನಡುವೆ ಘರ್ಷಣೆಗಳು ಸಂಭವಿಸಿದ ನಂತರ ಒಡಿಶಾದ ಬಾಲಾಸೋರ್‌ ಪಟ್ಟಣದಲ್ಲಿ ಕರ್ಫ್ಯೂ ಹೇರಲಾಗಿದೆ.

ಜಿಲ್ಲಾಡಳಿತವು ಅಂತರ್ಜಾಲ ಸೇವೆಯನ್ನು ನಗರದ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಸ್ಥಗಿತಗೊಳಿಸಿದೆ ಹಾಗೂ ನಿವಾಸಿಗಳಿಗೆ ಮನೆಯಿಂದ ಹೊರಹೋಗದಂತೆ ಸೂಚಿಸಿದೆ. ಕರ್ಫ್ಯೂ ಮಂಗಳವಾರ ಮಧ್ಯರಾತ್ರಿಯವರೆಗೆ ಜಾರಿಯಲ್ಲಿರಲಿದೆ.

ಬಕ್ರೀದ್‌ ಹಬ್ಬದ ಸಂದರ್ಭ ರಸ್ತೆಯಲ್ಲಿ ಪ್ರಾಣಿಬಲಿಯನ್ನು ಖಂಡಿಸಿ ಜನರ ಒಂದು ಗುಂಪು ಭುಜಖಿಯಾ ಪಿರ್‌ ಪ್ರದೇಶದಲ್ಲಿ ಸೋಮವಾರ ಧರಣಿ ನಡೆಸಿತ್ತು. ಆಗ ಇನ್ನೊಂದು ಗುಂಪು ಅವರತ್ತ ಕಲ್ಲು ತೂರಿದಾಗ ಘರ್ಷಣೆ ಆರಂಭಗೊಂಡಿತ್ತು. ಈ ಸಂಬಂಧ ಪೊಲೀಸರು ಇಲ್ಲಿಯ ತನಕ ಸುಮಾರು 30 ಜನರನ್ನು ಬಂಧಿಸಿದ್ದಾರೆ.

ಪೊಲೀಸರು ಬಾಲಾಸೋರ್‌ ಪಟ್ಟಣದಲ್ಲಿ ಫ್ಲ್ಯಾಗ್‌ ಮಾರ್ಚ್‌ ನಡೆಸಿದ್ದಾರೆ. ಎಡಿಜಿಪಿ (ಕಾನೂನು ಸುವ್ಯವಸ್ಥೆ) ಸಂಜಯ್‌ ಕುಮಾರ್‌ ಅವರು ನಗರದಲ್ಲೇ ಠಿಕಾಣಿ ಹೂಡಿದ್ದಾರೆ. ಘರ್ಷಣೆ ಸಂಭವಿಸಿರುವ ಸ್ಥಳದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News