×
Ad

ಹಿಂಸಾಚಾರ ಪೀಡಿತ ಲಡಾಖ್ ನಲ್ಲಿ ಕರ್ಫ್ಯೂ; 50 ಮಂದಿ ಪೊಲೀಸ್ ವಶಕ್ಕೆ

Update: 2025-09-25 12:34 IST

Photo credit: PTI

ಲೇಹ್: ಲಡಾಖ್‌ನ ಲೇಹ್‌ನಲ್ಲಿ ಬುಧವಾರ ನಡೆದ ಹಿಂಸಾಚಾರದಲ್ಲಿ ಮೂವರು ಮೃತಪಟ್ಟು, 80ಕ್ಕೂ ಹೆ‍ಚ್ಚು ಮಂದಿ ಗಾಯಗೊಂಡ ನಂತರ, ಗುರುವಾರ ಲೇಹ್ ನಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿದೆ.

ಲಡಾಖ್ ಗೆ ರಾಜ್ಯ ಸ್ಥಾನಮಾನ ನೀಡಬೇಕು ಹಾಗೂ ಲಡಾಖ್ ಗೂ ಆರನೆಯ ಪರಿಚ್ಛೇದವನ್ನು ವಿಸ್ತರಿಸಬೇಕು ಎಂದು ಕೇಂದ್ರ ಸರಕಾರವನ್ನು ಆಗ್ರಹಿಸಲು ಮುಂದಾಗಬೇಕು ಎಂದು ಲಡಾಖ್ ಉನ್ನತ ಸಮಿತಿ ಕರೆ ನೀಡಿದ ನಂತರ, ಬುಧವಾರ ಲೇಹ್ ನಲ್ಲಿ ಹಿಂಸಾಚಾರ ಭುಗಿಲೆದ್ದಿದ್ದವು.

ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹವಾಮಾನ ಹೋರಾಟಗಾರ ಸೋನಂ ವಾಂಗ್ಚುಕ್ ಅವರ ಹೋರಾಟವನ್ನು ಬೆಂಬಲಿಸಿ ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ ಕಾರ್ಗಿಲ್ ಬಂದ್ ಗೆ ಕರೆ ನೀಡಿದ ನಂತರ, ಕಾರ್ಗಿಲ್ ಸೇರಿದಂತೆ ಉಳಿದ ಪ್ರಮುಖ ಪಟ್ಟಣಗಳಲ್ಲೂ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಲೇಹ್ ನಲ್ಲಿ ತೀವ್ರ ಘರ್ಷಣೆ ಭುಗಿಲೆದ್ದ ನಂತರ, ಸೋನಂ ವಾಂಗ್ಚುಕ್ ಹದಿನೈದು ದಿನಗಳ ಉಪವಾಸ ಸತ್ಯಾಗ್ರಹಕ್ಕೆ ಕರೆ ನೀಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಓರ್ವ ಪೊಲೀಸ್ ಅಧಿಕಾರಿ, “ಕರ್ಫ್ಯೂ ಹೇರಿಕೆಯಾಗಿರುವ ಪ್ರದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾವುದೇ ಭಾಗದಿಂದಲೂ ಅಹಿತಕರ ಘಟನೆಗಳು ವರದಿಯಾಗಿಲ್ಲ” ಎಂದು PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News