×
Ad

ಡೆಹ್ರಾಡೂನ್: ಭೀಕರ ರಸ್ತೆ ಅಪಘಾತಕ್ಕೂ ಮೊದಲು ಮೋಜು, ಮಸ್ತಿ ಮಾಡಿದ್ದ ಸ್ನೇಹಿತರು

Update: 2024-11-15 16:10 IST

PC : ANI 

ಹೊಸದಿಲ್ಲಿ: ಸೋಮವಾರ ನಡೆದ ಭೀಕರ ಅಪಘಾತದಲ್ಲಿ ಐವರು ಸ್ನೇಹಿತರು ಮೃತಪಟ್ಟ ಘಟನೆ ಸೋಮವಾರ ನಡೆದಿದ್ದು, ಈ ಅಪಘಾತ ಸಂಭವಿಸುವುದಕ್ಕೂ ಮೊದಲು ಮೋಜು, ಮಸ್ತಿ ಮಾಡಿರುವ ಫೋಟೋ ಈಗ ವೈರಲ್‌ ಆಗಿದೆ.

ರಾತ್ರಿಯೆಲ್ಲ ಔತಣ ಕೂಟ, ಮೋಜು, ಮಸ್ತಿ ನಡೆಸಿದ ಗೆಳೆಯರ ಗುಂಪೊಂದು ಕಾರಿನಲ್ಲಿ ಮರಳುವಾಗ ಭೀಕರ ಅಪಘಾತಕ್ಕೀಡಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಸ್ನೇಹಿತರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸೋಮವಾರ ಡೆಹ್ರಾಡೂನ್ ನಲ್ಲಿ ನಡೆದಿತ್ತು.

ವೇಗವಾಗಿ ಚಲಿಸುತ್ತಿದ್ದ ಕಾರು ಟ್ರಕ್ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಗುನೀತ್ ಸಿಂಗ್, ಕಾಮಾಕ್ಷಿ ಸಿಂಘಾಲ್, ನವ್ಯಾ ಗೋಯಲ್, ರಿಷಭ್ ಜೈನ್ ಹಾಗೂ ಅತುಲ್ ಅಗರ್ವಾಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರೆಲ್ಲ ಡೆಹ್ರಾಡೂನ್ ಹಾಗೂ ಹಿಮಾಚಲ ಪ್ರದೇಶದ ಚಂಪಾದಲ್ಲಿನ ಕುನಾಲ್ ಕುಕ್ರೇಜಾ ನಿವಾಸಿಗಳು ಎಂದು ಹೇಳಲಾಗಿದೆ.

ಈ ಅಪಘಾತದಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿ ಸಿದ್ದೇಶ್ ಅಗರ್ವಾಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎನ್ನಲಾಗಿದೆ.

ಮೃತ ಯುವಕರು ಸಿದ್ದೇಶ್ ಆಯೋಜಿಸಿದ್ದ ಔತಣ ಕೂಟದಲ್ಲಿ ಪಾಲ್ಗೊಂಡ ನಂತರ, ತಮ್ಮ ನಿವಾಸಗಳಿಗೆ ಮರಳುತ್ತಿದ್ದರು ಎನ್ನಲಾಗಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಗೆ ಕೈಗೊಂಡಿದ್ದಾರೆ. ಅಪಘಾತಕ್ಕೆ ಅತಿಯಾದ ವೇಗ ಹಾಗೂ ಮುಂದೆ ಚಲಿಸುತ್ತಿದ್ದ ಟ್ರಕ್ ಅನ್ನು ಹಿಂದಿಕ್ಕಲು ಪ್ರಯತ್ನಿಸಿದ್ದು ಕಾರಣ ಎಂದು ಶಂಕಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News