ದಿಲ್ಲಿ: ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಶಿಕ್ಷಕನನ್ನು ಕೊಲೆಗೈದ ಬಾಲಕ
ಹೊಸದಿಲ್ಲಿ: ಹಲವು ಸಂದರ್ಭಗಳಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಶಿಕ್ಷಕನನ್ನು ಕೊಂದ ಆರೋಪದ ಮೇಲೆ 14 ವರ್ಷದ ಬಾಲಕನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
28ರ ಹರೆಯದ ಶಿಕ್ಷಕನು ಬಾಲಕನಿಗೆ ನಿತ್ಯ ನಿಂದನೆ ಮಾಡುತ್ತಿದ್ದು, ಹಲ್ಲೆಯ ವಿಡಿಯೋ ಕೂಡ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತೀಕಾರ ರೂಫದಲ್ಲಿ ವ್ಯಕ್ತಿಯನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿದ ಮೂರು ದಿನಗಳ ನಂತರ ಹುಡುಗನನ್ನು ಶುಕ್ರವಾರ ಬಂಧಿಸಲಾಯಿತು.
"ಆಗಸ್ಟ್ 30 ರಂದು ಮಧ್ಯಾಹ್ನ 2.15 ರ ಸುಮಾರಿಗೆ ಜಾಮಿಯಾ ನಗರದ ಬಟ್ಲಾ ಹೌಸ್ ನಲ್ಲಿರುವ ಮನೆಯ ಎರಡನೇ ಮಹಡಿಯ ಕೊಠಡಿಯಿಂದ ರಕ್ತ ಹೊರಬರುತ್ತಿದೆ ಎಂದು ಪಿಸಿಆರ್ ಕರೆ ಬಂದಿತು " ಎಂದು ಆಗ್ನೇಯ ದೆಹಲಿ ಡಿಸಿಪಿ ರಾಜೇಶ್ ಡಿಯೋ ಹೇಳಿದ್ದಾರೆ
ಸ್ಥಳಕ್ಕಾಗಮಿಸಿದ ಪೊಲೀಸ್ ತಂಡ ವ್ಯಕ್ತಿ ಕುತ್ತಿಗೆಯ ಮೇಲೆ ಆಳವಾದ ಗಾಯಗಳೊಂದಿಗೆ ನೆಲದ ಮೇಲೆ ಬಿದ್ದಿರುವುದನ್ನು ನೋಡಿದೆ. ಟ್ಯೂಶನ್ ಶಿಕ್ಷಕನು ತನ್ನ ಕುಟುಂಬದೊಂದಿಗೆ ಜಾಕೀರ್ ನಗರದಲ್ಲಿ ವಾಸಿಸುತ್ತಿದ್ದನು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತಕ್ಷಣ ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ, ಟ್ಯೂಟರ್ ಸಲಿಂಗಕಾಮಿ ಎಂದು ಹೇಳಲಾಗುತ್ತದೆ ಹಾಗೂ ಎರಡು ತಿಂಗಳ ಹಿಂದೆ ಹುಡುಗನನ್ನು ಭೇಟಿಯಾಗಿದ್ದನು ಮತ್ತು ನಂತರ ಹಲವಾರು ಸಂದರ್ಭಗಳಲ್ಲಿ ಅವನನ್ನು ಲೈಂಗಿಕವಾಗಿ ನಿಂದಿಸಿದ್ದಾನೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ.