×
Ad

ಡಿಜಿಸಿಎ ಪರಿಶೋಧನೆ ವೇಳೆ ಒಂದು ವರ್ಷದಲ್ಲಿ 263 ಲೋಪಗಳು ಪತ್ತೆ

Update: 2025-07-31 08:37 IST

PC: PTI

ಹೊಸದಿಲ್ಲಿ: ಕಳೆದ ಒಂದು ವರ್ಷದ ಅವಧಿಯಲ್ಲಿ ಭಾರತದ ಎಂಟು ವಿಮಾನಯಾನ ಸಂಸ್ಥೆಗಳಲ್ಲಿ ಒಟ್ಟು 263 ಲೋಪಗಳನ್ನು ಪರಿಶೋಧನೆ ವೇಳೆ ಪತ್ತೆ ಮಾಡಿರುವುದಾಗಿ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬುಧವಾರ ಪ್ರಕಟಿಸಿದೆ. ದೊಡ್ಡ ವಿಮಾನಯಾನ ಸಂಸ್ಥೆಗಳ ಪೈಕಿ 51 ಲೋಪಗಳು ಏರ್‌ಇಂಡಿಯಾದಲ್ಲಿ, 25 ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು 23 ಲೋಪಗಳು ಇಂಡಿಗೊದಲ್ಲಿ ಪತ್ತೆಯಾಗಿವೆ.

ಒಟ್ಟು 263 ಲೋಪಗಳ ಪೈಕಿ 19 ಲೆವೆಲ್ ವನ್ ಅಥವಾ ಮಹತ್ವದ ಲೋಪಗಳು ಈ ಹಿಂದಿನ ವಿಸ್ತಾರ ಏರ್‌ಲೈನ್ಸ್, ಎಐ ಮತ್ತು ಎಐ ಎಕ್ಸ್‌ಪ್ರೆಸ್ ನಲ್ಲಿ ಪತ್ತೆಯಾಗಿವೆ. ಉಳಿದ 244 ಲೋಪಗಳು ಲೆವೆಲ್ 2 ಅಥವಾ ಅನುಸರಣೆ ಮಾಡದೇ ಇರುವ ಸಂಬಂಧದ ಲೋಪಗಳಾಗಿವೆ. ಸರ್ಕಾರಿ ಸ್ವಾಮ್ಯದ ಅಲೈನ್ಸ್ ಏರ್ಲೈನ್ಸ್ ನ ಬಹುತೇಕ ವಿಮಾನಗಳು ಸದ್ಯಕ್ಕೆ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದು, ಇದರಲ್ಲಿ 57 ಲೋಪಗಳನ್ನು ಕಂಡುಹಿಡಿಯಲಾಗಿದೆ.

ಆದಾಗ್ಯೂ ದೊಡ್ಡ ಪ್ರಮಾಣದ ಪರಿಶೋಧನಾ ಫಲಿತಾಂಶಗಳು ವಿಸ್ತೃತ ಕಾರ್ಯಾಚರಣೆ ಹೊಂದಿರುವ ಮತ್ತು ದೊಡ್ಡ ಗಾತ್ರದ ವಿಮಾನಗಳನ್ನು ಹೊಂದಿರುವ ಸಂಸ್ಥೆಗಳಿಗೆ ಸಾಮಾನ್ಯ. ಅವುಗಳ ಕಾರ್ಯಾಚರಣೆ ಪ್ರಮಾಣಕ್ಕೆ ಹೋಲಿಸಿದರೆ ಅಸಾಮಾನ್ಯ ಲೋಪಗಳು ಇಲ್ಲ. ಜಾಗತಿಕವಾಗಿ ಕೂಡಾ ದೊಡ್ಡ ವಿಮಾನಯಾನ ಸಂಸ್ಥೆಗಳ ವೈವಿಧ್ಯತೆ ಮತ್ತು ತೀವ್ರತೆ ಹಿನ್ನೆಲೆಯಲ್ಲಿ ಇದೇ ಪ್ರವೃತ್ತಿ ಇದೆ" ಎಂದು ಡಿಜಿಸಿಎ ಹೇಳಿಕೆ ನೀಡಿದೆ.

ಜುಲೈ 1 ರಿಂದ 4ರವರೆಗೆ ನಡೆದ ಏರ್‌ಇಂಡಿಯಾ ವಿಮಾನಗಳ ಪರಿಶೀಲನೆ ವೇಳೆ 100 ಸುರಕ್ಷಾ ಅಂಶಗಳ ಉಲ್ಲಂಘನೆ ಕಂಡುಬಂದಿದೆ ಎಂಬ ವರದಿಗಳ ಬೆನ್ನಲ್ಲೇ ಡಿಜಿಸಿಎ ಈ ಹೇಳಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News