×
Ad

ಎಪ್ಸ್ಟೀನ್, ಅನಿಲ್ ಅಂಬಾನಿ, ದಿಲ್ಲಿ ʼನಾಯಕತ್ವʼದ ನಡುವೆ ನಂಟು?: ಎಪ್ಸ್ಟೀನ್ ಕಡತಗಳಿಂದ ಬಹಿರಂಗ!; The Hindu ವರದಿ

Update: 2026-02-02 23:41 IST

ಜೆಫ್ರಿ ಎಪ್ಸ್ಟೀನ್(aljazeera.com), ಭಾರತದ ಉದ್ಯಮಿ ಅನಿಲ್ ಅಂಬಾನಿ(PTI)

ಹೊಸದಿಲ್ಲಿ: ಅಮೆರಿಕದ ಲೈಂಗಿಕ ಅಪರಾಧಿ ಹಾಗೂ ಮಾನವಕಳ್ಳಸಾಗಾಟದ ಆರೋಪಿ ಜೆಫ್ರಿ ಎಪ್ಸ್ಟೀನ್, ಭಾರತದ ಉದ್ಯಮಿ ಅನಿಲ್ ಅಂಬಾನಿಯನ್ನು ಅಮೆರಿಕದ ಅಧ್ಯಕ್ಷ ಡೊಲಾಲ್ಡ್ ಟ್ರಂಪ್ ಅವರ ಅಳಿಯ ಹಾಗೂ ಸಲಹೆಗಾರ ಜಾರೆಡ್ ಕುಶ್ನರ್ ಹಾಗೂ ರಿಪಬ್ಲಿಕನ್ ಪಕ್ಷದ ರಾಜಕಾರಣಿ ಸ್ಟೀವ್ ಬ್ಯಾನನ್ ಅವರಿಗೆ ಪರಿಚಯಿಸಬೇಕೆಂದು ದಿಲ್ಲಿಯ ‘ನಾಯಕತ್ವ’ ಬಯಸಿತ್ತೆಂದು ಇತ್ತೀಚೆಗೆ ಬಿಡುಗಡೆಗೊಂಡ ವಿವಾದಾತ್ಮಕ ಎಪ್ಸ್ಟೀನ್ ಕಡತಗಳಿಂದ ಬಹಿರಂಗಗೊಂಡಿದೆ ಎಂದು thehindu.com ವರದಿ ಮಾಡಿದೆ.

ಅನಿಲ್ ಅಂಬಾನಿ ಅವರು ಎಪ್ಸ್ಟೀನ್ ಗೆ 2017 ಮಾರ್ಚ್‌ನಲ್ಲಿ ಈ ಕುರಿತಾಗಿ ಕಳುಹಿಸಿದ ಸಂದೇಶದಲ್ಲಿ ಈ ವಿಷಯವನ್ನು ಉಲ್ಲೇಖಿಸಲಾಗಿದೆ. ಎಪ್ಸ್ಟೀನ್ ಕಡತಗಳ ಹೊಸ ಕಂತನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಶುಕ್ರವಾರ ಬಿಡುಗಡೆಗೊಳಿಸಿತ್ತು.

2017 ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ಸಂದರ್ಭದಲ್ಲೇ ಈ ಭೇಟಿಯನ್ನು ಆಯೋಜಿಸಲಾಗಿತ್ತು ಎನ್ನಲಾಗಿದೆ.

2017 ಜುಲೈಯಲ್ಲಿ ಇಸ್ರೇಲ್‌ಗೆ ಭೇಟಿ ನೀಡಲು ಮೋದಿಗೆ ನೆರವು ನೀಡಿರುವುದಾಗಿ ಎಪ್ಸ್ಟೀನ್ ನೀಡಿದ ಹೇಳಿಕೆಯನ್ನು ನಿರಾಕರಿಸಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಆತನ ಹೇಳಿಕೆಯನ್ನು ‘‘ಶನಿವಾರ ಶಿಕ್ಷೆಗೊಳಗಾದ ಅಪರಾಧಿಯ ವ್ಯರ್ಥ ಪ್ರಲಾಪ’’ ಎಂದು ಕರೆದಿದೆ. ಆದರೆ, ಅಮೆರಿಕ ಭೇಟಿಯ ಕುರಿತ ಇತ್ತೀಚೆಗಿನ ಇಮೇಲ್‌ಗಳ ಕುರಿತು ಪ್ರತಿಕ್ರಿಯಿಸಲು ಅದು ನಿರಾಕರಿಸಿದೆ.

ಇದಲ್ಲದೆ, ಅನಿಲ್ ಅಂಬಾನಿ ಅವರು 2019 ಮೇ 23ರಂದು ಬೆಳಗ್ಗೆ 9.25ಕ್ಕೆ ಎಪ್ಸ್ಟೀನ್ ಅನ್ನು ಭೇಟಿ ಮಾಡಿದಂತೆ ಕಾಣುತ್ತದೆ. ಎಪ್ಸ್ಟೀನ್ ಈ ಭೇಟಿಯ ನಂತರ ಬ್ಯಾನನ್‌ಗೆ ಸಂದೇಶ ಕಳುಹಿಸಿದ್ದಾನೆ. ಈ ಸಂದೇಶದಲ್ಲಿ ಆತ ತಾನು ಪ್ರಧಾನಿ ಮೋದಿಯ ‘ವ್ಯಕ್ತಿ’ಯನ್ನು ಭೇಟಿಯಾಗಿರುವುದಾಗಿ ತಿಳಿಸಿದ್ದಾನೆ. ವಾಷಿಂಗ್ಟನ್‌ನಲ್ಲಿ ಮೋದಿ ಅವರೊಂದಿಗೆ ಯಾರೂ ಮಾತನಾಡುವುದಿಲ್ಲ ಎಂದು ತನ್ನನ್ನು ಭೇಟಿಯಾದ ವ್ಯಕ್ತಿ ದೂರಿದ್ದಾನೆ ಎಂದು ಎಪ್ಸ್ಟೀನ್ ತಿಳಿಸಿದ್ದಾನೆ.

ಈ ಸಂದೇಶಗಳು ಕೇಂದ್ರ ಸರಕಾರಕ್ಕೆ ಸಂಬಂಧಿಸಿವೆ ಎಂಬುದನ್ನು ಬಿಜೆಪಿ ನಿರಾಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News