×
Ad

ರಾಜಸ್ಥಾನ | ಬೆಂಕಿ ಹೊತ್ತಿಕೊಂಡ ಚಾಲಕ ರಹಿತ ಕಾರು: ಗಾಬರಿಗೊಳಗಾದ ಜನರು

Update: 2024-10-13 19:10 IST

Photo : X

ಜೈಪುರ: ಚಾಲಕ ರಹಿತ ಕಾರೊಂದು ಬೆಂಕಿ ಹೊತ್ತಿಕೊಂಡು, ರಸ್ತೆಯಲ್ಲಿನ ವಾಹನ ಸವಾರರ ಆತಂಕಕ್ಕೆ ಕಾರಣವಾದ ಘಟನೆ ಜೈಪುರದ ಅಜ್ಮೇರ್ ರಸ್ತೆಯಲ್ಲಿ ನಡೆದಿದೆ.

ಶನಿವಾರ ಅಜ್ಮೇರ್ ರಸ್ತೆಯ ಮೂಲಕ ಸುದರ್ಶನ್ ಪುರ್ ಪುಲಿಯಗೆ ತೆರಳುತ್ತಿದ್ದ ಚಾಲಕ ರಹಿತ ಕಾರೊಂದರಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಗಾಹುತಿಯಾಗಿದ್ದ ಕಾರು ರಸ್ತೆಯಲ್ಲಿನ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದರಿಂದ, ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಗೊಂದಲ ಮತ್ತು ಗಾಬರಿಗೊಳಗಾಗಿದ್ದಾರೆ.

ಇದಾದ ನಂತರ ಕಾರು ರಸ್ತೆ ವಿಭಜಕಕ್ಕೂ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.

ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಿಪ್ರವಾಗಿ ವೈರಲ್ ಆಗಿದ್ದು, ಹಲವಾರು ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ಸ್ಥಳದಲ್ಲೇ ಬಿಟ್ಟು ಓಡುತ್ತಿರುವುದು ಸೆರೆಯಾಗಿದೆ.

ಈ ಘಟನೆಯಿಂದ ದ್ವಿಚಕ್ರ ವಾಹನ ಸವಾರರು ಏಕಕಾಲಕ್ಕೆ ಗೊಂದಲ ಮತ್ತು ಗಾಬರಿಗೊಳಗಾಗಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News