ಅರವಿಂದ ಕೇಜ್ರಿವಾಲ್ ಈಡಿ ಅವಧಿ ಎ.1 ರವೆರೆಗೆ ವಿಸ್ತರಣೆ
Update: 2024-03-28 15:59 IST
ಅರವಿಂದ್ ಕೇಜ್ರಿವಾಲ್ | Photo: PTI
ಹೊಸದಿಲ್ಲಿ: ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಈಡಿಯಿಂದ ಬಂಧಿತರಾಗಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಈಡಿ ಕಸ್ಟಡಿ ಅವಧಿಯನ್ನು ಎ.1 ರವೆರೆಗೆ ದಿಲ್ಲಿ ನ್ಯಾಯಾಲಯ ವಿಸ್ತರಿಸಿದೆ.
ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಈಡಿಯಿಂದ ಬಂಧಿತರಾಗಿರುವ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಈಡಿ ಕಸ್ಟಡಿ ಅವಧಿ ಇಂದು ಮುಗಿಯುತ್ತಿರುವುದರಿಂದ ಅವರನ್ನು ದಿಲ್ಲಿಯ ರೌಸ್ ಅವೆನ್ಯೂ ಕೋರ್ಟಿಗೆ ಹಾಜರುಪಡಿಸಲಾಗಿತ್ತು.
ಕೇಜ್ರಿವಾಲ್ ಅವರನ್ನು ಇನ್ನೂ ಏಳು ದಿನಗಳ ಕಾಲ ತನ್ನ ಕಸ್ಟಡಿಗೆ ವಹಿಸಬೇಕೆಂದು ಈಡಿ ಕೋರಿತ್ತು. ಕೇಜ್ರಿವಾಲ್ ಇದಕ್ಕೆ ತಮ್ಮ ಆಕ್ಷೇಪ ವ್ಯಕ್ತಪಡಿಸಿಲ್ಲ.