×
Ad

ಫಾದರ್ ಆಫ್ ಹಿಪೋಕ್ರಸಿ: ಪ್ರಧಾನಿ ಮೋದಿ ವಿರುದ್ಧ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಟೀಕಾ ಪ್ರಹಾರ

Update: 2023-12-19 16:34 IST

ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ ವಿ ಶ್ರೀನಿವಾಸ್‌ 

ಹೊಸದಿಲ್ಲಿ: ಲೋಕಸಭೆಯ ಇತಿಹಾಸದಲ್ಲೇ ಅಭೂತಪೂರ್ವ ಬೆಳವಣಿಗೆಯಲ್ಲಿ ಮೂರು ದಿನಗಳ ಅವಧಿಯಲ್ಲಿ ಸಂಸತ್ತಿನಿಂದ ಒಟ್ಟು 141 ಸಂಸದರ ಅಮಾನತು ಕೋಲಾಹಲವನ್ನೇ ಸೃಷ್ಟಿಸಿದೆ. ಸಂಸತ್‌ ಭದ್ರತಾ ವೈಫಲ್ಯದ ಕುರಿತು ಚರ್ಚೆ ಹಾಗೂ ಗೃಹ ಸಚಿವರ ಹೇಳಿಕೆಗೆ ಆಗ್ರಹಿಸಿ ವಿಪಕ್ಷಗಳು ಪಟ್ಟು ಹಿಡಿದ ನಂತರದ ಬೆಳವಣಿಗೆಯಾಗಿದೆ.

ಇವೆಲ್ಲವುಗಳ ನಡುವೆ ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ ವಿ ಶ್ರೀನಿವಾಸ್‌ ಈಗಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸ್ವಾರಸ್ಯಕರ ಟ್ವೀಟ್‌ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರನ್ನು “ಫಾದರ್‌ ಆಫ್‌ ಹಿಪೋಕ್ರಸಿ” ಎಂದು ವ್ಯಂಗ್ಯವಾಡಿದ್ದಾರೆ.

“ಫಾದರ್‌ ಆಫ್‌ ಹಿಪೋಕ್ರಸಿಯು ಮದರ್‌ ಆಫ್‌ ಡೆಮಾಕ್ರಸಿ ಆಗಿರುವ ಸಂಸತ್ತನ್ನು ವಿಪಕ್ಷ ಮುಕ್ತವನ್ನಾಗಿಸಲು ಹೊರಟಿದ್ದಾರೆ, ವಾಹ್‌ ಮೋದೀ ಜಿ ವಾಹ್‌,” ಎಂದು ಶ್ರೀನಿವಾಸ್‌ ಟ್ವೀಟ್‌ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News