×
Ad

ಉತ್ತರ ಪ್ರದೇಶ | ರೈಲ್ವೇ ಹಳಿಯಲ್ಲಿ ಅಗ್ನಿಶಾಮಕ ಸಿಲಿಂಡರ್ ಪತ್ತೆ : ರೈಲು ನಿಲ್ಲಿಸಿದ ಚಾಲಕ

Update: 2024-09-29 21:31 IST

PC : NDTV 

ಲಕ್ನೊ : ಉತ್ತರಪ್ರದೇಶದ ಕಾನ್ಪುರದ ರೈಲು ಹಳಿಯಲ್ಲಿ ಈಗ ಮತ್ತೊಮ್ಮೆ ಸಂಶಯಾಸ್ಪದ ವಸ್ತು ಪತ್ತೆಯಾಗಿದೆ. ಪುಷ್ಪಕ್ ಎಕ್ಸ್‌ಪ್ರೆಸ್ ರೈಲಿನ ಚಾಲಕ ಹಳಿಯಲ್ಲಿ ಕೆಂಪು ಸಿಲಿಂಡರ್ ಗಮನಿಸಿದ್ದಾರೆ. ಕೂಡಲೇ ರೈಲಿಗೆ ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉತ್ತರಪ್ರದೇಶದ ರೈಲು ಹಳಿಗಳಲ್ಲಿ ಗ್ಯಾಸ್ ಸಿಲಿಂಡರ್ ಹಾಗೂ ಕಾಂಕ್ರಿಟ್ ಕಂಬಗಳು ಪತ್ತೆಯಾದ ಪ್ರಕರಣಗಳ ಬಳಿಕ ಈ ಘಟನೆ ಬೆಳಕಿಗೆ ಬಂದಿರುವುದರಿಂದ ಜನರಲ್ಲಿ ಆತಂಕ ಉಂಟಾಗಿದೆ.

ಮುಂಬೈಯಿಂದ ಲಕ್ನೋಗೆ ತೆರಳುತ್ತಿದ್ದ ರೈಲು ಗೋವಿಂದಪುರಿ ನಿಲ್ದಾಣ ಸಮೀಪದ ಹೋಲ್ಡಿಂಗ್ ಲೈನ್‌ಗೆ ರವಿವಾರ ಸಂಜೆ 4.15ಕ್ಕೆ ತಲುಪುತ್ತಿದ್ದಂತೆ ಚಾಲಕ ಹಳಿಯಲ್ಲಿ ಅಗ್ನಿ ಶಾಮಕ ಸಿಲಿಂಡರ್ ಇರುವುದನ್ನು ಗಮನಿಸಿದ. ಬಳಿಕ ರೈಲಿನ ವೇಗವನ್ನು ಕಡಿತಗೊಳಿಸಿದ. ಇದರಿಂದ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿತು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News