×
Ad

ಸಾಮೂಹಿಕ ಅತ್ಯಾಚಾರ ಆರೋಪ; ಟಿಎಂಸಿ ಮುಖಂಡನ ಬಂಧನ

Update: 2024-02-18 08:28 IST

Photo: twitter.com/hindupost

ಕೊಲ್ಕತ್ತಾ: ಅತ್ಯಾಚಾರ ಮತ್ತು ಕೊಲೆ ಯತ್ನ ಆರೋಪದಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡ ಶಿಬಪ್ರಸಾದ್ ಹಝ್ರಾನನ್ನು ಪಶ್ಚಿಮ ಬಂಗಾಳದ ಸಂದೇಶ್ ಖಲಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

ಶಿಬಪ್ರಸಾದ್ ಹಝ್ರಾ ಮತ್ತು ಆತನ ಸಹಚರ ಉತ್ತಮ್ ಸರ್ಕಾರ್ ವಿರುದ್ಧ ಅತ್ಯಾಚಾರ ಮತ್ತು ಕೊಲೆ ಯತ್ನ ಪ್ರಕರಣ ದಾಖಲಿಸಲು ಶನಿವಾರ ಕೋರ್ಟ್ ಅನುಮತಿ ನೀಡಿದ್ದು, ಉತ್ತಮ್ ನನ್ನು ಮೊದಲೇ ಬಂಧಿಸಲಾಗಿತ್ತು.

ಸಂದೇಶ್ ಖಲಿ 2ನೇ ಬ್ಲಾಕ್ ಅಧ್ಯಕ್ಷರಾಗಿರುವ ಹಝ್ರಾ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯರಾಗಿರುವ ಉತ್ತಮ್, ಟಿಎಂಸಿ ಮುಖಂಡ ಶೇಖ್ ಶಹಾಜಹಾನ್ ಅವರ ನಿಕಟವರ್ತಿಗಳು ಎನ್ನಲಾಗಿದೆ. ಈ ಇಬ್ಬರ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿರುವ ಹಿನ್ನೆಲೆಯಲ್ಲಿಈ ಬೆಳವಣಿಗೆ ನಡೆದಿದೆ.

ಗುರುವಾರ ನ್ಯಾಯಾಲಯದಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿರುವ ಮಹಿಳೆ, ಇಬ್ಬರ ವಿರುದ್ಧ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಯತ್ನದ ಆರೋಪವನ್ನೂ ಮಾಡಿದ್ದರು. ಹಝ್ರಾ ಹಾಗೂ ಉತ್ತಮ್ ವಿರುದ್ಧ ಮಹಿಳೆ ಪ್ರತಿಭಟನೆ ನಡೆಸುತ್ತಿರುವ ಸಂದೇಶ್ ಖಲಿ ಬ್ಲಾಕ್ 2ರಲ್ಲಿ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಈ ಕ್ರಮ ಕೈಗೊಂಡಿದ್ದಾರೆ.

ಶನಿವಾರ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯರು ತಾಲೂಕಿಗೆ ಭೇಟಿ ನೀಡಿ, ಬಂಗಾಳದ ನಾರ್ತ್ 24 ಪರ್ಗನಾಸ್ ಜಿಲ್ಲೆಯ ಗ್ರಾಮಸ್ಥರಿಂದ ಮಾಹಿತಿ ಪಡೆದರು. 550 ಕೋಟಿ ರೂಪಾಯಿ ಪಡಿತರ ಹಗರಣದ ಸಂಬಂಧ ತನಿಖೆ ನಡೆಸಲು ಆಗಮಿಸಿದ್ದ ಕಾನೂನು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮೇಲೆ ಜನವರಿ 5ರಂದು ಶಹಾಜಹಾನ್ ನ ಇಬ್ಬರು ಸಹಚರರು ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News