×
Ad

ಪೊಲೀಸರ ಕಣ್ಣಿಗೆ ಮೆಣಸಿನ ಪುಡಿ ಎರಚಿ ಗ್ಯಾಂಗ್‌ಸ್ಟರ್‌ನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

Update: 2023-07-12 20:07 IST

ಜೈಪುರ್:‌ ಕೊಲೆ ಪ್ರಕರಣವೊಂದರ ಆರೋಪಿಯಾಗಿರುವ ಗ್ಯಾಂಗ್‌ಸ್ಟರ್‌ ಕುಲದೀಪ್‌ ಜಘಿನಾ ಎಂಬಾತನ್ನು ಪೊಲೀಸ್‌ ಕಸ್ಟಡಿಯಲ್ಲಿರುವಾಗಲೇ ರಾಜಸ್ಥಾನದ ಭರತಪುರ್‌ ಎಂಬಲ್ಲಿ ಕೆಲ ದುಷ್ಕರ್ಮಿಗಳು ಪೊಲೀಸರ ಕಣ್ಣಿಗೆ ಮೆಣಸಿನ ಪುಡಿ ಎರಚಿ ನಂತರ ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ಜಘಿನಾನನ್ನು ಜೈಪುರ ಜೈಲಿನಿಂದ ಭರತಪುರ್‌ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿರುವಾಗ ಜೈಪುರ್-ಆಗ್ರಾ ಹೆದ್ದಾರಿಯ ಅಮೋಲಿ ಟೋಲ್‌ ಪ್ಲಾಝಾ ಸಮೀಪ ಘಟನೆ ನಡೆದಿದೆ.

ಈ ಪ್ರಕರಣದ ಆರೋಪಿಗಳು ಬಳಸಿದ್ದ ವಾಹನವನ್ನು ನೆರೆಯ ಗ್ರಾಮದಿಂದ ವಶಪಡಿಸಿಕೊಳ್ಳಲಾಗಿದೆ.

ಬಿಜೆಪಿ ಮುಖಂಡ ಕೃಪಾಲ್‌ ಜಘೀನಾ ಎಂಬವರ ಹತ್ಯೆಗೆ ಪ್ರತೀಕಾರವಾಗಿ ಗ್ಯಾಂಗ್‌ಸ್ಟರ್‌ನನ್ನು ಗುಂಡಿಕ್ಕಿ ಸಾಯಿಸಲಾಗಿದೆ ಎಂದು ಶಂಕಿಸಲಾಗಿದೆ.

ಕೃಪಾಲ್‌ ಅವರನ್ನು ಸೆಪ್ಟೆಂಬರ್‌ 4, 2022ರಂದು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News