×
Ad

ಗಾಝಾ | ಇಸ್ರೇಲ್ ದಾಳಿಗೆ ಫೆಲೆಸ್ತೀನ್‌ ಪತ್ರಕರ್ತೆ ಇಸ್ಲಾಂ ಅಬೇದ್ ಮೃತ್ಯು

Update: 2025-09-01 21:41 IST

Photo | X

ಗಾಝಾ : ಇಸ್ರೇಲ್ ಸೇನೆ ಗಾಝಾ ನಗರದ ವಸತಿ ಕಟ್ಟಡವೊಂದರ ಮೇಲೆ ನಡೆಸಿದ ದಾಳಿಯಲ್ಲಿ ʼಅಲ್-ಕುದ್ಸ್ʼ ಟಿವಿಯಲ್ಲಿ ಕೆಲಸ ಮಾಡುತ್ತಿದ್ದ ಫೆಲೆಸ್ತೀನ್‌ ಪತ್ರಕರ್ತೆ ಇಸ್ಲಾಂ ಅಬೇದ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಗಾಝಾ ನಗರದ ವಸತಿ ಕಟ್ಟಡವೊಂದರ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಲ್ ಕುದ್ಸ್ ಅಲ್ ಯೂಮ್(Al-Quds Al-Youm TV) ಟಿವಿ ಚಾನೆಲ್ ಪತ್ರಕರ್ತೆ ಇಸ್ಲಾಂ ಅಬೇದ್, ಪತಿ ಮತ್ತು ಮಕ್ಕಳು ಮೃತಪಟ್ಟಿದ್ದಾರೆ ಎಂದು Drop Site news ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.

ಗಾಝಾದಾದ್ಯಂತ ಇಸ್ರೇಲ್ ದಾಳಿಯನ್ನು ಮುಂದುವರಿಸಿದ್ದು, ಸೋಮವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 78 ಫೆಲೆಸ್ತೀನ್‌ ನಾಗರಿಕರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದ ನಾಸೆರ್ ಆಸ್ಪತ್ರೆಯ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಐವರು ಪತ್ರಕರ್ತರು ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News