×
Ad

ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಹುತಾತ್ಮ ಗೌರವ ಪ್ರದಾನ ಮಾಡಿ: ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಆಗ್ರಹ

Update: 2025-05-01 18:32 IST

ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್‌ ಗಾಂಧಿ | Photo : PTI

ಹೊಸದಿಲ್ಲಿ: ಇತ್ತೀಚೆಗೆ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಹತ್ಯೆಗೀಡಾದವರಿಗೆ ಹುತಾತ್ಮ ಗೌರವ ಪ್ರದಾನ ಮಾಡಬೇಕು ಎಂದು ಗುರುವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಲೋಕಸಭೆಯಲ್ಲಿನ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, "ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳೊಂದಿಗೆ ನಾನು ನಿಲ್ಲಲಿದ್ದೇನೆ. ಈ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಹುತಾತ್ಮ ಗೌರವ ಪ್ರದಾನ ಮಾಡಬೇಕು ಎಂಬ ಆಗ್ರಹವನ್ನು ಬೆಂಬಲಿಸುತ್ತೇನೆ", ಎಂದು ಹೇಳಿದ್ದಾರೆ.

"ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಕುಟುಂಬಗಳ ಭಾವನಾತ್ಮಕ ಕ್ಷಣದಲ್ಲಿ ನಾನೂ ಅವರೊಂದಿಗಿದ್ದೇನೆ. ಸಂತ್ರಸ್ತರಿಗೆ ಹುತಾತ್ಮ ಗೌರವ ಪ್ರದಾನ ಮಾಡಬೇಕು ಎಂಬ ಬೇಡಿಕೆಗೆ ನಾನು ದನಿಗೂಡಿಸುತ್ತೇನೆ", ಎಂದು ಅವರು ಘೋಷಿಸಿದ್ದಾರೆ.

"ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರಿಗೆ ಹುತಾತ್ಮ ಗೌರವ ನೀಡುವ ಮೂಲಕ, ಅವರ ಕುಟುಂಬಗಳ ಭಾವನೆಗಳನ್ನು ಗೌರವಿಸಬೇಕು ಎಂದು ನಾನು ಪ್ರಧಾನಿಯಲ್ಲಿ ಮನವಿ ಮಾಡುತ್ತೇನೆ", ಎಂದು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಇದಕ್ಕೂ ಮುನ್ನ, ಬುಧವಾರದಂದು ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳ ಸದಸ್ಯರನ್ನು ಉತ್ತರ ಪ್ರದೇಶದ ಕಾನ್ಪುರದಲ್ಲಿ ರಾಹುಲ್‌ ಗಾಂಧಿಯವರು ಭೇಟಿ ಮಾಡಿದಾಗ, ಮೃತರಿಗೆ ಹುತಾತ್ಮ ಗೌರವ ಪ್ರದಾನ ಮಾಡಬೇಕು ಎಂದು ಸಂತ್ರಸ್ತರ ಕುಟುಂಬಗಳ ಸದಸ್ಯರು ಮನವಿ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News