×
Ad

ಹರ್ಯಾಣ | ದಲಿತ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣ : ಚಂಡಿಗಢ ಪೊಲೀಸರಿಂದ ಸಿಟ್ ರಚನೆ

Update: 2025-10-10 22:00 IST

 ವೈ. ಪುರಾಣ ಕುಮಾರ್ | Photo Credit : newindianexpress.com

ಚಂಡಿಗಢ, ಅ.10: ಹರ್ಯಾಣದ ಹಿರಿಯ ದಲಿತ ಪೊಲೀಸ್ ಅಧಿಕಾರಿ ವೈ. ಪೂರನ್‌ ಕುಮಾರ್ ಅವರ ಆತ್ಮಹತ್ಯೆ ಪ್ರಕರಣದ ತನಿಖೆಗೆ ಚಂಡಿಗಢ ಪೊಲೀಸ್ ಶುಕ್ರವಾರ 6 ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರೂಪಿಸಿದೆ.

ಈ ತಂಡದ ನೇತೃತ್ವವನ್ನು ಚಂಡಿಗಢದ ಐಜಿ ಪುಷ್ಪೇಂದ್ರ ಕುಮಾರ್ ವಹಿಸಲಿದ್ದಾರೆ.

ಚಂಡಿಗಢದ ಎಸ್‌ಎಸ್‌ಪಿ ಕನ್ವರ್‌ದೀಪ್ ಕೌರ್, ನಗರ ಎಸ್‌ಪಿ ಕೆ.ಎಂ. ಪ್ರಿಯಾಂಕಾ, ಡಿಎಸ್‌ಪಿ ಚರಣಜಿತ್ ಸಿಂಗ್ ವಿರ್ಕ್ ಹಾಗೂ ಇತರ ಅಧಿಕಾರಿಗಳಾದ ಗುರ್ಜಿತ್ ಕೌರ್, ಜೈವೀರ್ ರಾಣಾ ಅವರು ತಂಡದ ಸದಸ್ಯರಾಗಿರಲಿದ್ದಾರೆ ಎಂದು ಅಧಿಕೃತ ಆದೇಶ ತಿಳಿಸಿದೆ.

ಪ್ರಕರಣದ ಗಂಭೀರತೆ ಹಾಗೂ ಸೂಕ್ಷ್ಮತೆಯನ್ನು ಗಮನದಲ್ಲಿ ಇರಿಸಿಕೊಂಡು ಕೇಂದ್ರಾಡಳಿತ ಪ್ರದೇಶವಾದ ಚಂಡಿಗಢದ ಐಜಿಪಿ ಅವರ ಮೇಲ್ವಿಚಾರಣೆಯಲ್ಲಿ ಪ್ರಕರಣದ ತ್ವರಿತ, ನಿಷ್ಪಕ್ಷಪಾತ, ಕೂಲಂಕಷ ಹಾಗೂ ಸಂಪೂರ್ಣ ತನಿಖೆ ನಡೆಸಲು ಈ ತಂಡವನ್ನು ರೂಪಿಸಲಾಗಿದೆ ಎಂದು ಅದು ತಿಳಿಸಿದೆ.

‘‘ತಂಡ ಪುರಾವೆಗಳ ಸಂಗ್ರಹ, ಸಾಕ್ಷಿಗಳ ಪರೀಕ್ಷೆ, ತಜ್ಞರ ಅಭಿಪ್ರಾಯ ಪಡೆಯವುದು, ಕಾನೂನು ಸಲಹೆ ಮೊದಲಾದವು ಸೇರಿದಂತೆ ಎಫ್‌ಐಆರ್ ನಂ. 156/2025ರ ಎಲ್ಲಾ ಆಯಾಮಗಳನ್ನು ಸಮಯ ಮಿತಿಯಲ್ಲಿ ತನಿಖೆ ನಡೆಸಲಿದೆ ಹಾಗೂ ತನಿಖೆ ಪೂರ್ಣಗೊಂಡ ಬಳಿಕ ಅಂತಿಮ ವರದಿ ಸಿದ್ಧಪಡಿಸಲಿದೆ’’ ಎಂದು ಆದೇಶ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News