ಗುಜರಾತ್ ನ ವಡೋದರಾದಲ್ಲಿ ಭೀಕರ ದೋಣಿ ದುರಂತ : ಪಿಕ್ನಿಕ್ ಗೆ ತೆರಳಿದ್ದ 3 ಮಕ್ಕಳು, 2 ಶಿಕ್ಷಕರು ಮೃತ್ಯು
Update: 2024-01-18 19:30 IST
Photo: indianexpress.com
ವಡೋದರಾ : ಇಲ್ಲಿನ ಹರ್ನಿ ಸರೋವರದ ಲೇಕ್ ವಲಯದಲ್ಲಿ ಖಾಸಗಿ ಶಾಲೆಯೊಂದು ಆಯೋಜಿಸಿದ್ದ ಪಿಕ್ನಿಕ್ ವೇಳೆ ಗುರುವಾರ ಸಂಜೆ ದೋಣಿ ಮುಳುಗಿ ಮೂವರು ಶಾಲಾ ಮಕ್ಕಳು ಮತ್ತು ಇಬ್ಬರು ಶಿಕ್ಷಕರು ಸೇರಿದಂತೆ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಪ್ರಕಾರ, ಘಟನೆಯ ಸಮಯದಲ್ಲಿ ದೋಣಿಯಲ್ಲಿ ಸುಮಾರು 27 ಮಂದಿ ಇದ್ದರು. 19 ಮಕ್ಕಳು ಮತ್ತು ನಾಲ್ವರು ಶಿಕ್ಷಕರನ್ನು ಹೊರತೆಗೆಯಲಾಗಿದ್ದು, ನಾಪತ್ತೆಯಾಗಿರುವ ಇತರ ನಾಲ್ವರು ಮಕ್ಕಳಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು indianexpress ವರದಿ ಮಾಡಿದೆ.