ಅಮೆರಿಕದಲ್ಲಿ ಹೈದರಾಬಾದ್ ಮೂಲದ ದಂತ ವೈದ್ಯಕೀಯ ವಿದ್ಯಾರ್ಥಿಯ ಗುಂಡಿಕ್ಕಿ ಹತ್ಯೆ
Update: 2025-10-04 22:31 IST
Image: @BRSHarish
ಹೈದರಾಬಾದ್, ಅ. 4: ಅಮೆರಿಕದ ಡಲ್ಲಾಸ್‌ನಲ್ಲಿ ಹೈದರಾಬಾದ್ ಮೂಲದ 27 ವರ್ಷದ ದಂತ ವಿದ್ಯಾರ್ಥಿಯನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ.
ಹತ್ಯೆಯಾದ ವಿದ್ಯಾರ್ಥಿಯನ್ನು ಚಂದ್ರಶೇಖರ್ ಪೋಲ್ ಎಂದು ಗುರುತಿಸಲಾಗಿದೆ.
ಚಂದ್ರಶೇಖರ್ ಪೋಲ್ ಶುಕ್ರವಾರ ರಾತ್ರಿ ಗ್ಯಾಸ್ ಸ್ಟೇಷನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭ ಅಪರಿಚಿತ ದುಷ್ಕರ್ಮಿಗಳು ಅವರ ಮೇಲೆ ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಹೈದರಾಬಾದ್‌ನಲ್ಲಿ ದಂತ ಶಸ್ತ್ರಚಿಕಿತ್ಸೆಯಲ್ಲಿ ಪದವಿ ಶಿಕ್ಷಣ ಪೂರೈಸಿದ ಬಳಿಕ ಪೋಲ್ ಅವರು ಉನ್ನತ ಶಿಕ್ಷಣಕ್ಕಾಗಿ 2023ರಲ್ಲಿ ಅಮೆರಿಕಕ್ಕೆ ತೆರಳಿದ್ದರು. ಅಲ್ಲಿ ಅವರು 6 ತಿಂಗಳ ಹಿಂದೆ ತನ್ನ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಅನಂತರ ಅವರು ಗ್ಯಾಸ್ ಸ್ಟೇಷನ್‌ನಲ್ಲಿ ಅರೆ ಕಾಲಿಕ ಕೆಲಸ ಮಾಡುತ್ತಾ, ಪೂರ್ಣಕಾಲಿಕ ಕೆಲಸವನ್ನು ಹುಡುಕುತ್ತಿದ್ದರು.
ಚಂದ್ರಶೇಖರನ್ ಹೆತ್ತವರು ಪುತ್ರನ ಮೃತದೇಹವನ್ನು ಭಾರತಕ್ಕೆ ತರಲು ಕೇಂದ್ರ ಸರಕಾರದ ನೆರವು ಕೋರಿದ್ದಾರೆ.