×
Ad

ನಾನು ರೈತನ ಮಗ, ಹೆದರುವುದೂ ಇಲ್ಲ, ಶರಣಾಗುವುದೂ ಇಲ್ಲ: ಸತ್ಯಪಾಲ್ ಮಲಿಕ್

Update: 2024-02-23 15:26 IST

ಹೊಸದಿಲ್ಲಿ: ನನ್ನನ್ನು ಹೆದರಿಸಲು ಸರಕಾರಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ತನ್ನ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆದ ಬಳಿಕ ಸತ್ಯಪಾಲ್ ಮಲಿಕ್ ಹೇಳಿದ್ದಾರೆ. ಕಳೆದ ಕೆಲವು ದಿನಗಳಿಂದ ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೊರತಾಗಿಯೂ ನನ್ನ ನಿವಾಸಗಳಲ್ಲಿ ದಾಳಿ ನಡೆಸಲಾಗುತ್ತಿದೆ ಮತ್ತು ನನ್ನ ಚಾಲಕ ಮತ್ತು ಸಹಾಯಕನಿಗೆ ‘ಕಿರುಕುಳ’ ನೀಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

‘‘ಯಾರು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ನಾನು ದೂರು ನೀಡಿರುವೆನೋ, ಅವರನ್ನು ತನಿಖೆ ಮಾಡುವ ಬದಲು ಸಿಬಿಐಯು ನನ್ನ ನಿವಾಸಗಳ ಮೇಲೆ ದಾಳಿ ನಡೆಸುತ್ತಿದೆ’’ ಎಂದು ಅವರು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.

‘‘ನನ್ನ ಮನೆಯಲ್ಲಿ 4-5 ಕುರ್ತಾ ಮತ್ತು ಪೈಜಾಮ್‌ಗಳನ್ನು ಹೊರತುಪಡಿಸಿ ನಿಮಗೆ ಬೇರೇನೂ ಸಿಗುವುದಿಲ್ಲ. ನಾನು ರೈತನ ಮಗ, ನಾನು ಹೆದರುವುದೂ ಇಲ್ಲ, ಶರಣಾಗುವುದೂ ಇಲ್ಲ’’ ಎಂದು ಅವರು ಘೋಷಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News