ಆ ದಿನಗಳಲ್ಲಿ ಸಚಿವರು ಪ್ರಧಾನಿಯ ನಡೆಯನ್ನು ವಿರೋಧಿಸಬಹುದಿತ್ತು : ಸುಬ್ರಹ್ಮಣ್ಯನ್ ಸ್ವಾಮಿ
Update: 2023-12-24 15:21 IST
ಸುಬ್ರಹ್ಮಣ್ಯನ್ ಸ್ವಾಮಿ | Photo: PTI
ಹೊಸದಿಲ್ಲಿ : ತಾವು ಕೇಂದ್ರ ಸಂಪುಟದಲ್ಲಿ ಸಚಿವರಾಗಿದ್ದ ದಿನಗಳನ್ನು ನೆನಪಿಸಿಕೊಂಡಿರುವ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಆ ದಿನಗಳಲ್ಲಿ ಸಚಿವರು ಪ್ರಧಾನಿಯ ನಡೆಯನ್ನು ವಿರೋಧಿಸುವ ಅವಕಾಶ ಇತ್ತು ಎಂದು ದೃಷ್ಟಾಂತವೊಂದನ್ನು ವಿವರಿಸಿ x ನಲ್ಲಿ ಪೋಸ್ಟ್ ಮಾಡಿದ್ದಾರೆ.
"ನಾನು ಕೇಂದ್ರದ ಕಾನೂನು ಸಚಿವನಾಗಿದ್ದೆ. ಶೇಷನ್ ಅವರನ್ನು ನಾನು ನೇಮಿಸಿದಾಗ, ಚಂದ್ರಶೇಖರ್ ಮತ್ತು ರಾಜೀವ್ ಗಾಂಧಿ ಅವರಿಗೆ ನಿಭಾಯಿಸಲು ಸಾಧ್ಯವಿಲ್ಲ ಎಂದು ನನಗೆ ಎಚ್ಚರಿಕೆ ನೀಡಿದ್ದರು. ಅವರ ಎಚ್ಚರಿಕೆಯ ಹೊರತಾಗಿಯೂ ನಾನು ಶೇಷನ್ ಅವರನ್ನು ನೇಮಿಸಿದೆ. ನಾನು ಅವರಿಗೆ "ನಮಗೆ ಈ ನೇಮಕ ಬೇಕು" ಎಂದು ಹೇಳಿದೆ. ಆ ದಿನಗಳಲ್ಲಿ ಮಂತ್ರಿಗಳು ಪ್ರಧಾನ ಮಂತ್ರಿಯ ನಡೆಯನ್ನು ವಿರೋಧಿಸಬಹುದಿತ್ತು. ಶೇಷನ್ ಈ ಹಿಂದೆ ಹಾರ್ವರ್ಡ್‌ನಲ್ಲಿ ನನ್ನ ವಿದ್ಯಾರ್ಥಿಯಾಗಿದ್ದರು" ಎಂದು ಬರೆದು ಕೊಂಡಿದ್ದಾರೆ.