×
Ad

ಭಯೋತ್ಪಾದನೆ ಪ್ರಕರಣದಲ್ಲಿ ಕೆನಡಾ ಅಧಿಕಾರಿಯನ್ನು ಹೆಸರಿಸಿದ ಭಾರತ

Update: 2024-10-19 09:35 IST

ಸಂದೀಪ್ ಸಿಂಗ್ ಸಿಧು PC:x.com/eOrganiser

ಹೊಸದಿಲ್ಲಿ: ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆಯೇ, ಕೆನಡಾದ ಗಡಿ ಸೇವೆಗಳ ಏಜೆನ್ಸಿ ಅಧಿಕಾರಿ ಸಂದೀಪ್ ಸಿಂಗ್ ಸಿಧು ಅವರ ಹೆಸರನ್ನು ಭಾರತ ಗಡೀಪಾರು ಮಾಡಬೇಕಾಗಿರುವ ದೇಶದ್ರೋಹಿಗಳ ಪಟ್ಟಿಯಲ್ಲಿ ಸೇರಿಸಿದೆ.

ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಮತ್ತು ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ ಅಧಿಕಾರಿಗಳು ಇತ್ತೀಚೆಗೆ ಸಾರ್ವಜನಿಕವಾಗಿ ಮಾಹಿತಿ ನೀಡಿ, ಭಾರತೀಯ ರಾಜತಾಂತ್ರಿಕ ಅಧಿಕಾರಿಗಳು ಕೆನಡಾದ ಸಿಕ್ಖ್ ಪ್ರತ್ಯೇಕತಾದಿಗಳನ್ನು ಗುರಿ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದರು. ಇಂಥ ಪ್ರತ್ಯೇಕತಾವಾದಿ ನಾಯಕರ ಬಗೆಗಿನ ಮಾಹಿತಿಯನ್ನು ತಮ್ಮ ಸರ್ಕಾರದ ಜತೆ ಹಂಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು.

ಭಾರತೀಯ ಅಧಿಕಾರಿಗಳು ಈ ಮಾಹಿತಿಯನ್ನು ಭಾರತೀಯ ಸಂಘಟಿತ ಅಪರಾಧ ಸಂಘಟನೆಗಳ ಜತೆ ಹಂಚಿಕೊಳ್ಳುತ್ತಿದ್ದು, ಇವರು ಕೆನಡಾ ನಾಗರಿಕರಾಗಿರುವ ಇಂಥ ಹೋರಾಟಗಾರರ ಶೂಟಿಂಗ್, ಸುಲಿಗೆ ಮತ್ತು ಹತ್ಯೆಯ ಪ್ರಯತ್ನವನ್ನೂ ಮಾಡುತ್ತಿದ್ದಾರೆ ಎನ್ನುವುದು ಕೆನಡಾದ ಆರೋಪ.

ಆದರೆ ಭಾರತ ಈ ಆರೋಪವನ್ನು ತಳ್ಳಿಹಾಕಿದೆ. ಸಿಬಿಎಸ್ಎ ಅಧಿಕಾರಿಯಾಗಿರುವ ಸಂದೀಪ್ ಸಿಂಗ್ ಸಿಧು ನಿಷೇಧಿತ ಅಂತರಾಷ್ಟ್ರೀಯ ಸಿಕ್ಖ್ ಯುವಕರ ಒಕ್ಕೂಟದ ಸದಸ್ಯ. ಇವರ ವಿರುದ್ಧ ಪಂಜಾಬ್ ನಲ್ಲಿ ಭಯೋತ್ಪಾದನೆ ಚಟುವಟಿಕೆಗೆ ಕುಮ್ಮಕ್ಕು ನೀಡುತ್ತಿರುವ ಆರೋಪ ಹೊರಿಸಲಾಗಿದೆ. ಇವರು ಪಾಕಿಸ್ತಾನ ಮೂಲದ ಖಲಿಸ್ತಾನಿ ಪ್ರತ್ಯೇಕತಾವಾ ಕಭೀರ್ ಸಿಂಗ್ ರೋಡ್ ಮತ್ತು ಇತರ ಐಎಸ್ಐ ಪದಾಧಿಕಾರಿಗಳ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದ್ದು, 2020ರ ಬಲ್ವೀಂದರ್ ಸಿಂಗ್ ಸಂಧು ಹತ್ಯೆಯಲ್ಲಿ ಪಾತ್ರ ವಹಿಸಿದ ಆರೋಪ ಹೊರಿಸಲಾಗಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News