×
Ad

ಡಿಜಿಟಲ್ ಅರೆಸ್ಟ್ ಪ್ರಕರಣ : ದೇಶದಲ್ಲೇ ಮೊದಲ ಬಾರಿಗೆ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Update: 2025-07-19 20:05 IST

Photo | indiatoday

ಹೊಸದಿಲ್ಲಿ : ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ಪಶ್ಚಿಮ ಬಂಗಾಳ ನ್ಯಾಯಾಲಯ 9 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಕಲ್ಯಾಣಿ ನ್ಯಾಯಾಲಯ ಈ ತೀರ್ಪು ನೀಡಿದೆ. ಸೈಬರ್ ಅಪರಾಧದ ವಿರುದ್ಧ ಭಾರತದ ಹೋರಾಟದಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ.

9 ಅಪರಾಧಿಗಳನ್ನು ಇಮ್ತಿಯಾಝ್ ಅನ್ಸಾರಿ, ಶಾಹಿದ್ ಅಲಿ ಶೇಖ್, ಶಾರುಖ್‌ ರಫೀಕ್ ಶೇಖ್, ಜತಿನ್ ಅನುಪ್ ಲಾಡ್ವಾಲ್, ರೋಹಿತ್ ಸಿಂಗ್, ರೂಪೇಶ್ ಯಾದವ್, ಸಾಹಿಲ್ ಸಿಂಗ್, ಪಠಾಣ್ ಸುಮೈಯಾ ಬಾನು ಮತ್ತು ಫಲ್ದು ಅಶೋಕ್ ಎಂದು ಗುರುತಿಸಲಾಗಿದೆ. ಇವರಲ್ಲಿ ನಾಲ್ವರು ಅಪರಾಧಿಗಳು ಮಹಾರಾಷ್ಟ್ರದವರು, ಮೂವರು ಹರ್ಯಾಣದವರು ಮತ್ತು ಇಬ್ಬರು ಗುಜರಾತ್‌ನವರಾಗಿದ್ದಾರೆ. 

ದೇಶದಲ್ಲೇ ಡಿಜಿಟಲ್ ಬಂಧನ ಪ್ರಕರಣದಲ್ಲಿ ಮೊದಲ ಬಾರಿಗೆ ಅಪರಾಧ ಸಾಬೀತಾಗಿದೆ ಮತ್ತು ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ.

2024ರ ಅಕ್ಟೋಬರ್‌ನಲ್ಲಿ 1 ಕೋಟಿ ರೂ. ವಂಚನೆ ಬಗ್ಗೆ ನಿವೃತ್ತ ವಿಜ್ಞಾನಿ ಪಾರ್ಥ ಕುಮಾರ್ ಮುಖರ್ಜಿ ಅವರು ದೂರು ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News