IPL 2024| ಕೊಹ್ಲಿ ಆಕರ್ಷಕ ಅರ್ಧ ಶತಕ: KKR ಗೆ 183 ರನ್‌ ಗಳ ಗುರಿ ನೀಡಿದ RCB

Update: 2024-03-29 17:28 GMT

ವಿರಾಟ್‌ ಕೊಹ್ಲಿ| Photo: X \ @IPL

ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ನ ಪಂದ್ಯದಲ್ಲಿ ರೋಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಕೋಲ್ಕತಾ ನೈಟ್‌ ರೈಡರ್ಸ್‌ ಗೆ 183 ರನ್‌ ಗಳ ಗುರಿ ನೀಡಿದೆ.

ಪಂದ್ಯದಲ್ಲಿ ಟಾಸ್‌ ಸೋತು ಬ್ಯಾಟಿಂಗ್‌ ಗೆ ಇಳಿದ ಆರ್‌ಸಿಬಿ ತಂಡವು ಉತ್ತಮ ಆರಂಭ ಪಡೆಯದ ಹೊರತಾಗಿಯೂ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿಯ ಆಕರ್ಷಕ 83 ರನ್‌ ಗಳ ಬ್ಯಾಟಿಂಗ್‌ ನೆರವಿನಿಂದ ನಿಗಧಿತ 20 ಓವರ್‌ ಗಳಲ್ಲಿ 182 ರನ್‌ ಪೇರಿಸಿತು.

ಆರ್‌ಸಿಬಿ ಪರ ನಾಯಕ ಡುಪ್ಲೆಸಿಸ್‌ 8, ಕ್ಯಾಮರೋನ್‌ ಗ್ರೀನ್‌ 33, ಮ್ಯಾಕ್ಸ್‌ವೆಲ್‌ 28, ರಜತ್‌ ಪಾಟಿದಾರ್‌ ಹಾಗೂ ಅನುಜ್‌ ರಾವತ್ ಕ್ರಮವಾಗಿ 3 ರನ್‌ ಬಾರಿಸಿದರು. ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್‌ ಪ್ರದರ್ಶಿಸಿದ ದಿನೇಶ್ ಕಾರ್ತಿಕ್‌ 8 ಎಸೆತಗಳಲ್ಲಿ 20 ರನ್‌ ಪೇರಿಸಿ ತಂಡದ ಗುರಿ ಹೆಚ್ಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News