×
Ad

ಜೋಧ್ ಪುರ: ಒಂದೇ ಕುಟುಂಬದ 4 ಜನರ ಹತ್ಯೆ

Update: 2023-07-19 14:56 IST

ಜೈಪುರ: ರಾಜಸ್ಥಾನದ ಜೋಧ್ಪುರದಲ್ಲಿ ಕಳೆದ ರಾತ್ರಿ ಆರು ತಿಂಗಳ ಹೆಣ್ಣು ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಕೊಲೆ ಮಾಡಿ ಶವಗಳನ್ನು ಅವರ ಮನೆಯ ಅಂಗಳದಲ್ಲಿ ಸುಟ್ಟು ಹಾಕಲಾಗಿದೆ.

ಈ ಆಘಾತಕಾರಿ ಘಟನೆಯು ಅಸೆಂಬ್ಲಿ ಚುನಾವಣೆಗೆ ತಿಂಗಳುಗಳ ಮೊದಲು ಅಶೋಕ್ ಗೆಹ್ಲೋಟ್ ಸರಕಾರದ ಮೇಲೆ ಪ್ರತಿಪಕ್ಷ ಬಿಜೆಪಿ ತೀಕ್ಷ್ಣವಾದ ದಾಳಿಗೆ ಕಾರಣವಾಗಿದೆ. ಮುಖ್ಯಮಂತ್ರಿ ತವರು ಜಿಲ್ಲೆ ಜೋಧ್ ಪುರದಲ್ಲಿ ಈ ಕೃತ್ಯ ನಡೆದಿದೆ ಎಂದು ಬಿಜೆಪಿ ಕೂಡ ಒತ್ತಿ ಹೇಳಿದೆ.

ಪೊಲೀಸರ ಪ್ರಕಾರ, ಜೋಧ್ ಪುರದ ಚೌರೈ ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಪುನರಾಮ್ (55) ಎಂಬುವವರ ಮನೆಯಿಂದ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದಾರೆ. ಕುಟುಂಬದವರ ಮನೆಗೆ ಪ್ರವೇಶಿಸಿದಾಗ, ಪುನರಾಮ್, ಅವರ ಪತ್ನಿ ಭನ್ವ್ರಿ (50) ಹಾಗೂ ಸೊಸೆ ಧಾಪು ಅವರ ಸುಟ್ಟ ಶವಗಳು ಅಂಗಳದಲ್ಲಿ ಕಂಡುಬಂದವು. ಧಾಪುವಿನ ಮೃತದೇಹದ ಪಕ್ಕದಲ್ಲಿ ಭಯಾನಕ ಕಪ್ಪು ದ್ರವ್ಯರಾಶಿ ಹಾಗೂ ಅವಳ ಆರು ವರ್ಷದ ಹೆಣ್ಣುಮಗುವಿನ ಶವ ಪತ್ತೆಯಾಗಿದೆ.

ಹಂತಕರು ನಾಲ್ವರ ಕತ್ತು ಸೀಳಿ ಕೊಲೆ ಮಾಡಿ, ನಂತರ ಶವಗಳನ್ನು ಅಂಗಳಕ್ಕೆ ಎಳೆದು ಬೆಂಕಿ ಹಚ್ಚಿದ್ದಾರೆ. ಈ ಕೊಲೆಗಳು ವೈಯಕ್ತಿಕ ದ್ವೇಷದ ಪರಿಣಾಮವಾಗಿರಬಹುದು, ತನಿಖೆಯಲ್ಲಿ ಪ್ರತಿಯೊಂದು ಕೋನವನ್ನು ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೋರೆನ್ಸಿಕ್ ತಂಡವು ಘಟನಾ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಕಲೆಕ್ಟರ್ ಹಿಮಾಂಶು ಗುಪ್ತಾ ಹಾಗೂ ಜೋಧ್ ಪುರ ಗ್ರಾಮಾಂತರ ಪೊಲೀಸ್ ಮುಖ್ಯಸ್ಥ ಧರ್ಮೇಂದ್ರ ಸಿಂಗ್ ಸೇರಿದಂತೆ ಜಿಲ್ಲೆಯ ಉನ್ನತ ಅಧಿಕಾರಿಗಳು ಪ್ರದೇಶದ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.

ಜೋಧ್ಪುರ ಘಟನೆಗೆ ಸಂಬಂಧಿಸಿದಂತೆ ಅಶೋಕ್ ಗೆಹ್ಲೋಟ್ ಸರಕಾರವನ್ನು ತರಾಟೆಗೆ ತೆಗದುಕೊಂಡಿರುವ ಬಿಜೆಪಿ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಎತ್ತಿದೆ. ‘ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಇನ್ನುಳಿದ ಕಡೆ ಸ್ಥಿತಿ ಏನಾಗಬಹುದು? ಎಂದು ರಾಜ್ಯ ಬಿಜೆಪಿ ಟ್ವೀಟ್ನಲ್ಲಿ ಪ್ರಶ್ನಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News