ತೆಲಂಗಾಣ: ಅಮಾನತು ಬೆನ್ನಲ್ಲೇ ಬಿಆರ್‌ಎಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಕೆ. ಕವಿತಾ
Update: 2025-09-03 13:05 IST
ಕೆ ಕವಿತಾ (Photo: PTI)
ಹೈದರಾಬಾದ್: ಬಿಆರ್‌ಎಸ್ ಪಕ್ಷದಿಂದ ಅಮಾನತುಗೊಂಡಿದ್ದ ತೆಲಂಗಾಣ ಶಾಸಕಿ ಕೆ ಕವಿತಾ ಪಕ್ಷಕ್ಕೆ ರಾಜೀನಾಮೆಯನ್ನು ಘೋಷಿಸಿದ್ದಾರೆ.
ಕೆ ಕವಿತಾ ಅವರನ್ನು ಭಾರತ ರಾಷ್ಟ್ರ ಸಮಿತಿ ಪಕ್ಷದಿಂದ ಮಂಗಳವಾರ ಪಕ್ಷದ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಅವರು ಅಮಾನತು ಗೊಳಿಸಿದ್ದರು.
"ನನಗೆ ಹುದ್ದೆ ಮೇಲೆ ದುರಾಸೆ ಇಲ್ಲ. ನಾನು ಬಿಆರ್‌ಎಸ್‌ಗೆ ರಾಜೀನಾಮೆ ನೀಡುತ್ತಿದ್ದೇನೆ ಮತ್ತು ರಾಜ್ಯ ವಿಧಾನ ಪರಿಷತ್ತಿಗೂ ರಾಜೀನಾಮೆ ಸಲ್ಲಿಸುತ್ತಿದ್ದೇನೆ” ಎಂದು ಕವಿತಾ ಅವರು ಹೇಳಿದ್ದಾರೆ.