ತನ್ನ ನಿವಾಸದಿಂದ ‘ಜೈ ಶ್ರೀರಾಂ’ ಧ್ವಜವನ್ನು ತೆಗೆದ ಕಮಲನಾಥ್
Update: 2024-02-19 22:01 IST
Photo : NDTV
ಹೊಸದಿಲ್ಲಿ : ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ವದಂತಿಗಳ ನಡುವೆಯೇ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರು ಇಲ್ಲಿಯ ತನ್ನ ನಿವಾಸದಿಂದ ‘ಜೈ ಶ್ರೀರಾಂ’ ಧ್ವಜವನ್ನು ತೆಗೆದಿದ್ದಾರೆ.
ಮಾಧ್ಯಮ ವರದಿಯಂತೆ ಕಮಲನಾಥ್ ರವಿವಾರ ತನ್ನ ದಿಲ್ಲಿ ನಿವಾಸದ ಮೇಲೆ ಕೇಸರಿ ಧ್ವಜವನ್ನು ಹಾರಿಸಿದ್ದರು.
ರವಿವಾರ ಕಮಲನಾಥ್ ಮತ್ತು ಅವರ ಪುತ್ರ ಮಧ್ಯಪ್ರದೇಶದ ಏಕೈಕ ಕಾಂಗ್ರೆಸ್ ಸಂಸದ ನಕುಲ್‌ನಾಥ್ ದಿಲ್ಲಿಗೆ ಆಗಮಿಸುವುದರೊಂದಿಗೆ ಬಿಜೆಪಿ ಸೇರ್ಪಡೆ ವದಂತಿಗಳು ಇನ್ನಷ್ಟು ದಟ್ಟಗೊಂಡಿದ್ದವು. ನಕುಲ್ ಈಗಾಗಲೇ ತನ್ನ ಸಾಮಾಜಿಕ ಮಾಧ್ಯಮ ಪ್ರೊಫೈಲ್ನಿಂದ ಪಕ್ಷದ ಹೆಸರನ್ನು ತೆಗೆದಿದ್ದಾರೆ.
ಕಮಲನಾಥ್ ದಿಲ್ಲಿಯಲ್ಲಿ ಬಿಜೆಪಿ ನಾಯಕತ್ವದೊಂದಿಗೆ ಮಾತುಕತೆಗಳನ್ನು ನಡೆಸಬಹುದು ಎಂಬ ವದಂತಿಗಳೂ ಹರಡಿದ್ದವು.
ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜೀತು ಪಟ್ವಾರಿಯವರು ಕಮಲನಾಥ ಪಕ್ಷವನ್ನು ತೊರೆದು ಬಿಜೆಪಿಗೆ ಸೇರುವ ಸಾಧ್ಯತೆಯನ್ನು ನಿರಾಕರಿಸಿದ್ದಾರೆ.