×
Ad

ಸಮುದ್ರದೊಳಕ್ಕೆ ಬಿದ್ದ ಅಪಾಯಕಾರಿ ಸರಕು: ಕೇರಳದಲ್ಲಿ ಅಲರ್ಟ್ ಘೋಷಣೆ

Update: 2025-05-24 21:30 IST

Credit : thenewsminute.com

ತಿರುವನಂತಪುರಂ: ಸರಕು ಹಡಗಿನಲ್ಲಿ ಸಾಗಣೆಯಾಗುತ್ತಿದ್ದ ತೈಲ ಕಂಟೈನರ್ ಗಳು ಅಪಘಾತಕ್ಕೀಡಾಗಿ ಕೇರಳ ಕರಾವಳಿಯ ಸಮುದ್ರದೊಳಕ್ಕೆ ಬಿದ್ದಿದ್ದು, ಈ ಘಟನೆಯಿಂದ ಜನರು ಗಾಬರಿಗೊಳಗಾಗಿರುವ ಘಟನೆ ನಡೆದಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಅರಬ್ಬಿ ಸಮುದ್ರದ ಕೊಚ್ಚಿ ತೀರದ ನೈರುತ್ಯ ದಿಕ್ಕಿನಿಂದ ಸುಮಾರು 38 ನಾಟಿಕಲ್ ಮೈಲಿ ದೂರದಲ್ಲಿ ಈ ಅಪಘಾತ ಸಂಭವಿಸಿದೆ.

ವಿಳಿಂಜಮ್ ನಿಂದ ಕೊಚ್ಚಿ ತೀರವನ್ನು ಸಮೀಪಿಸುತ್ತಿದ್ದ ವೇಳೆ ಲಿಬರಿಯನ್ ಫ್ಲ್ಯಾಗ್ ಕ್ಯಾರಿಯರ್ ಹಡಗು ವಾಲಿಕೊಂಡಿದ್ದರಿಂದ, ಸುಮಾರು 10 ಕಂಟೈನರ್ ಗಳು ಸಮುದ್ರಕ್ಕೆ ಉರುಳಿವೆ ಎಂದು ಶಂಕಿಸಲಾಗಿದೆ. ಈ ಹಡಗಿನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲ 24 ಮಂದಿ ಸಿಬ್ಬಂದಿಯನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ ಹಾಗೂ ನೌಕಾಪಡೆ ರಕ್ಷಿಸಿವೆ.

ಈ ಕಂಟೈನರ್ ಗಳು ಸಾಗರ ಅನಿಲ ತೈಲ ಹಾಗೂ ತೀರಾ ಕಡಿಮೆ ಪ್ರಮಾಣದ ಸಲ್ಫರ್ ಇಂಧನ ತೈಲವನ್ನು ಹೊತ್ತೊಯ್ಯತ್ತಿದ್ದವು ಎಂದು ಹೇಳಲಾಗಿದೆ.

ಅಪಾಯಕಾರಿ ವಸ್ತುವನ್ನು ಹೊಂದಿದ್ದ ಕಂಟೈನರ್ ಗಳು ಅರಬ್ಬಿ ಸಮುದ್ರಕ್ಕೆ ಉರುಳಿದ್ದು, ಈ ವಸ್ತು ಸಮುದ್ರ ತೀರಕ್ಕೆ ಕೊಚ್ಚಿಕೊಂಡು ಬರಬಹುದು ಎಂದು ಕರಾವಳಿ ರಕ್ಷಣಾ ಪಡೆ ಮಾಹಿತಿ ನೀಡಿದ್ದು, ಹೀಗಾಗಿ, ಜನರು ಅದರ ಬಳಿ ತೆರಳಬಾರದು ಅಥವಾ ಅದನ್ನು ಮುಟ್ಟುಬಾರದು ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಜನರಿಗೆ ಎಚ್ಚರಿಕೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News