×
Ad

ಕೇರಳ: ಬಾವಿಯೊಳಗೆ ಮಣ್ಣಿನಡಿ ಸಿಲುಕಿದ ವ್ಯಕ್ತಿಯನ್ನು ರಕ್ಷಿಸಲು ಮುಂದುವರಿದ ಪ್ರಯತ್ನ

Update: 2023-07-09 11:07 IST

ತಿರುವನಂತಪುರಂ: ಕೇರಳದಲ್ಲಿ ಬಾವಿಯೊಳಗೆ ಸುಮಾರು 24 ಗಂಟೆಗಳಿಂದ ಮಣ್ಣಿನಡಿ ಸಿಲುಕಿದ್ದ 55 ವರ್ಷದ ವ್ಯಕ್ತಿಯನ್ನು ಹೊರ ತೆಗೆಯಲು ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು ರವಿವಾರದ ಬೆಳಗ್ಗೆ ತನಕ ವ್ಯಕ್ತಿಯನ್ನು ರಕ್ಷಿಸಲು ಸಾಧ್ಯವಾಗಿಲ್ಲ. ವ್ಯಕ್ತಿಯು ಬದುಕುಳಿಯುವ ಕುರಿತಂತೆ ಆತಂಕ ಹೆಚ್ಚಾಗಿದೆ.

ತಮಿಳುನಾಡು ಮೂಲದ ವ್ಯಕ್ತಿಯನ್ನು ಹೊರತರಲು ರಾತ್ರಿಯಿಡೀ ಪ್ರಯತ್ನ ಮುಂದುವರಿದಿದೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಅಧಿಕಾರಿಗಳು ಮತ್ತು ಪೊಲೀಸರು ತಿಳಿಸಿದ್ದಾರೆ, ಆದರೆ ಅವರು ಇಲ್ಲಿಯವರೆಗೆ ಯಶಸ್ವಿಯಾಗಲಿಲ್ಲ.

ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ನೆಲೆಸಿರುವ ಮಹಾರಾಜನ್ ಅವರು ವಿಝಿಂಜಂ ಬಳಿಯ ಮುಕ್ಕೋಳದಲ್ಲಿ ಬಾವಿಯೊಳಗೆ ರಿಂಗ್ ಗಳನ್ನು ಸರಿಪಡಿಸುತ್ತಿದ್ದಾಗ ಮಣ್ಣು ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಘಟನೆ ಕುರಿತು ಮಾಹಿತಿ ಲಭಿಸಿದೆ.

ವಿಝಿಂಜಂ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಸ್ಥಳೀಯ ಜನರು ಸುಮಾರು 100 ಅಡಿ ಆಳದ ಬಾವಿಯಿಂದ ಮಣ್ಣನ್ನು ಹೊರತೆಗೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News