×
Ad

ಲಾರೆನ್ಸ್ ಬಿಷ್ಣೋಯಿ ಸೋದರ ಅನ್‌ಮೋಲ್ ಭಾರತಕ್ಕೆ ಗಡಿಪಾರು

ಬಾಬಾಸಿದ್ದೀಕಿ, ಮೂಸೆವಾಲಾ ಕೊಲೆ ಪ್ರಕರಣಗಳ ಆರೋಪಿ

Update: 2025-11-18 21:12 IST

ಅನ್‌ಮೋಲ್ ಬಿಷ್ಣೋಯಿ | PTI

ಹೊಸದಿಲ್ಲಿ,ನ.18: ಎನ್‌ಸಿಪಿ ಶಾಸಕ ಬಾಬಾ ಸಿದ್ದಿಕ್ ಹತ್ಯೆ ಪ್ರಕರಣದ ಆರೋಪಿ ಅನ್‌ಮೋಲ್ ಬಿಷ್ಣೋಯಿಯನ್ನು ಅಮೆರಿಕ ದೇಶವು ಮಂಗಳವಾರ ಭಾರತಕ್ಕೆ ಗಡಿಪಾರು ಮಾಡಿದೆ. ಅನ್‌ಮೋಲ್ ಬಿಷ್ಣೋಯಿ ಕುಖ್ಯಾತ ಪಾತಕಿ ಲಾರೆನ್ಸ್ ಬಿಷ್ಣೋಯಿಯ ಸಹೋದರನಾಗಿದ್ದಾನೆ.

ಅನ್‌ಮೋಲ್ ಬಿಷ್ಣೋಯಿಯನ್ನು ಗಡಿಪಾರು ಮಾಡಿರುವ ಬಗ್ಗೆ ತನಗೆ ಅಮೆರಿಕದ ಆಂತರಿಕ ಭದ್ರತಾ ಇಲಾಖೆಯಿಂದ ಬಾಬಾ ಸಿದ್ದೀಕಿ ಅವರ ಪುತ್ರ ಝೀಶನ್ ಸಿದ್ದೀಕಿ ಅವರಿಗೆ ಇಮೇಲ್ ಸಂದೇಶ ಬಂದಿದ್ದು, ಅದನ್ನವರು ಎನ್‌ಡಿಟಿವಿ ಜೊತೆ ಹಂಚಿಕೊಂಡಿದ್ದಾರೆ.

ಅನ್‌ಮೋಲ್‌ನನ್ನು ನವೆಂಬರ್ 18ರಂದು ಗಡಿಪಾರು ಮಾಡಲಾಗಿದೆಯೆಂದು ಇಮೇಲ್‌ ನಲ್ಲಿ ತಿಳಿಸಲಾಗಿದೆಯೆಂದು ಝೀಶನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

2024ರ ಆಕ್ಟೋಬರ್‌ ನಲ್ಲಿ ನಡೆದ ಬಾಬಾ ಸಿದ್ದೀಕ್ ಅವರ ಹತ್ಯೆ ಹಾಗೂ 2022ರ ಮೇನಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಕೊಲೆ ಸೇರಿದಂತೆ ಹಲವಾರು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ಅನ್ಮೋಲ್ ಬಿಷ್ಣೋಯಿ ಭಾರತ ಸರಕಾರಕ್ಕೆ ಬೇಕಾಗಿದ್ದಾನೆ. 2024ರ ಏಪ್ರಿಲ್‌ ನಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಮುಂಬೈ ನಿವಾಸದ ಹೊರಗೆ ಗುಂಡು ಹಾರಾಟ ನಡೆಸಿದ ಪ್ರಕರಣದಲ್ಲೂ ಆತ ಆರೋಪಿಯಾಗಿದ್ದಾನೆ.

ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಿ ಆರೋಪದಲ್ಲಿ ಕಳೆದ ವರ್ಷದ ನವೆಂಬರ್‌ ನಲ್ಲಿ ಅನ್‌ಮೋಲ್‌ ನನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News