×
Ad

ಮಧ್ಯ ಪ್ರದೇಶ: ಚಲಿಸುತ್ತಿರುವ ರೈಲಿನಲ್ಲಿ ಮಹಿಳೆಯ ಅತ್ಯಾಚಾರ

Update: 2023-12-11 23:57 IST

Photo: PTI 

ಸಾತ್ನಾ: ಮೂವತ್ತು ವರ್ಷದ ಮಹಿಳೆಯನ್ನು ಚಲಿಸುತ್ತಿರುವ ರೈಲಿನಲ್ಲಿ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ ಎಂದು ಸರಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಸೋಮವಾರ ತಿಳಿಸಿದೆ.

ಸಾತ್ನಾ ಹಾಗೂ ಕಟ್ನಿ ವಿಭಾಗದ ಪಕರಿಯಾ ರೈಲು ನಿಲ್ದಾಣದಲ್ಲಿ ಜಬಲ್ಪುರ-ರೇವಾ ಮೆಮು ರೈಲಿಗೆ ಮಹಿಳೆಯೋರ್ವರು ರವಿವಾರ ಸಂಜೆ ಹತ್ತಿದ ಸಂದರ್ಭ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ಬಂದಾ (ಉತ್ತರಪ್ರದೇಶ) ಮೂಲದ ಹಾಗೂ ಕಟ್ನಿ ನಿವಾಸಿ ಪಂಕಜ್ ಕುಶ್ವಾಹ (23)ನನ್ನು ಬಂಧಿಸಲಾಗಿದೆ ಎಂದು ಸಾತ್ನಾ ಜಿಆರ್ಪಿ ನಿಲ್ದಾಣದ ಉಸ್ತುವಾರಿ ಎಲ್.ಪಿ. ಕಶ್ಯಪ್ ಹೇಳಿದ್ದಾರೆ.

ರೈಲು ಹತ್ತಿದ ಮಹಿಳೆಯನ್ನು ಪಂಕಜ್ ಕುಶ್ವಾಹ್ ಅತ್ಯಾಚಾರ ಎಸಗಿದ್ದಾನೆ. ಆತನಿಂದ ತಪ್ಪಿಸಿಕೊಂಡ ಮಹಿಳೆ ಸಾತ್ನಾ ನಿಲ್ದಾಣದಲ್ಲಿರುವ ಜಿಆರ್ಪಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲು ತಂಡವೊಂದನ್ನು ಕಳುಹಿಸಿ ಕೊಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಕಾಂತಿ ಜಿಆರ್ಪಿ ವ್ಯಾಪ್ತಿಯಲ್ಲಿ ಅಪರಾಧ ಸಂಭವಿಸಿರುವುದರಿಂದ, ಪ್ರಕರಣವನ್ನು ಅಲ್ಲಿನ ಪೊಲೀಸರಿಗೆ ವರ್ಗಾಯಿಸಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News