ಮಹಾರಾಷ್ಟ್ರ | ವಿಧಾನಸಭೆ ಕಲಾಪದ ವೇಳೆ ರಮ್ಮಿ ಆಡಿದ ಸಚಿವರಿಗೆ ಕ್ರೀಡಾ ಖಾತೆ!
Photo | indiatoday
ಮುಂಬೈ : ಮಹಾರಾಷ್ಟ್ರ ವಿಧಾನಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಮೊಬೈಲ್ ಫೋನ್‌ನಲ್ಲಿ ರಮ್ಮಿ ಆಡುತ್ತಿದ್ದಾಗ ಸಿಕ್ಕಿಬಿದ್ದ ಮಹಾರಾಷ್ಟ್ರ ಕೃಷಿ ಸಚಿವ ಮಾಣಿಕ್‌ರಾವ್ ಕೊಕಟೆ ಅವರಿಗೆ ಕ್ರೀಡಾ ಸಚಿವಾಲಯದ ಜವಾಬ್ಧಾರಿಯನ್ನು ನೀಡಲಾಗಿದೆ.
ವಿಧಾನಸಭೆ ಕಲಾಪದ ವೇಳೆ ಮಾಣಿಕ್‌ರಾವ್ ಕೊಕಾಟೆ ಆನ್‌ಲೈನ್‌ನಲ್ಲಿ ರಮ್ಮಿ ಆಡುತ್ತಿರುವ ವೀಡಿಯೊ ವೈರಲ್ ಆಗಿತ್ತು. ಆ ಬಳಿಕ ಮಹಾರಾಷ್ಟ್ರ ಸರಕಾರ ಅವರಿಂದ ಕೃಷಿ ಖಾತೆಯನ್ನು ಹಿಂಪಡೆದುಕೊಂಡಿದೆ. ದತ್ತಾತ್ರೇಯ ಭರ್ನೆ ಅವರಿಗೆ ಕೃಷಿ ಇಲಾಖೆಯನ್ನು ವಹಿಸಿದೆ.
ವಿಧಾನಸಭಾ ಕಲಾಪದ ವೇಳೆ ಮಾಣಿಕ್‌ರಾವ್ ಕೊಕಾಟೆ ಆನ್‌ಲೈನ್ ರಮ್ಮಿ ಆಟ ಆಡುತ್ತಿದ್ದಾರೆ ಎಂಬ ಆರೋಪದ ವಿಡಿಯೋ ಕ್ಲಿಪ್ ಅನ್ನು ಎನ್‌ಸಿಪಿ (ಶರದ್ ಪವಾರ್ ಬಣ) ಶಾಸಕ ರೋಹಿತ್ ಪವಾರ್ ಹಂಚಿಕೊಂಡ ನಂತರ ವಿವಾದ ಭುಗಿಲೆದ್ದಿತ್ತು.
ಘಟನೆ ಬಗ್ಗೆ ಕೊಕಾಟೆ ಕ್ಷಮೆ ಯಾಚಿಸಿದ ಹಿನ್ನೆಲೆಯಲ್ಲಿ ಮತ್ತು ಮುಂದೆ ಇಂಥ ಘಟನೆಗಳು ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಸಂಪುಟದಲ್ಲಿ ಮುಂದುವರಿಯಲು ಅಜಿತ್ ಪವಾರ್ ಸಮ್ಮತಿ ಸೂಚಿಸಿದರು ಎಂದು ಪಕ್ಷದ ಮೂಲಗಳು ಹೇಳಿವೆ.