×
Ad

ಸೋನ್‌ಮಾರ್ಗ್ ಹೋಟೆಲ್‌ನಲ್ಲಿ ಭಾರಿ ಅಗ್ನಿದುರಂತ; ಅಪಾರ ನಷ್ಟ

Update: 2025-02-09 07:45 IST

PC: x.com/thetribunechd

ಸೋನ್‌ಮಾರ್ಗ್: ಜಮ್ಮು ಮತ್ತು ಕಾಶ್ಮೀರದ ಸೋನ್‌ಮಾರ್ಗ್ ಪಟ್ಟಣದ ಹೋಟೆಲ್ ಒಂದರಲ್ಲಿ ಭೀಕರ ಅಗ್ನಿದುರಂತ ಸಂಭವಿಸಿದ್ದು, ಅಕ್ಕಪಕ್ಕದ ಅಂಗಡಿ ಮಳಿಗೆಗಳು ಮತ್ತು ಮನೆಗಳಿಗೆ ಹರಡಿ ಭಾರಿ ನಷ್ಟ ಉಂಟಾಗಿದೆ.

ಸಾವು ನೋವಿನ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಗಳು ಬಂದಿಲ್ಲ. ಆದರೂ ಹಲವು ಅಂಗಡಿ ಹಾಗೂ ಹೋಟೆಲ್ ಗಳು ಭಸ್ಮವಾಗಿವೆ. ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ. ಸೋನ್‌ಮಾರ್ಗ್ ಮಾರುಕಟ್ಟೆಯ ಸೌನ್ಸಾರ್ ನಲ್ಲಿ ದುರಂತ ಸಂಭವಸಿದೆ ಎಂದು ಐಎಎನ್ಎಸ್ ವರದಿ ಮಾಡಿದೆ.

ಗುಂಡ್ ಕಂಗನ್ ಅಗ್ನಿಶಾಮಕ ಸೇವೆಯ ಸಿಬ್ಬಂದಿ, ಸೇನೆ ಮತ್ತು ರಾಜ್ಯ ವಿಕೋಪ ಸ್ಪಂದನೆ ಪಡೆಯ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳು ಬೆಂಕಿ ಆರಿಸಲು ನೆರವಾದರು ಎಂದು ಗಂದೆರ್ಬಲ್ ಜಿಲ್ಲಾಧಿಕಾರಿ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.

ಐದು ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸುತ್ತಿದ್ದು, ಬೆಂಕಿಯನ್ನು ನಿಯಂತ್ರಿಸಲಾಗಿದೆ. ಬೆಂಕಿ ನಂದಿಸಲು ಪ್ರಯತ್ನ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಸಂಭಾವ್ಯ ನೆರವು ಒದಗಿಸಲು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಸ್ಥಳೀಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ.

Full View


ವಾರ್ತಾ ಭಾರತಿಯ ವಾಟ್ಸ್ ಆ್ಯಪ್ ಚಾನಲ್ ಗೆ ಸೇರಲು ಕ್ಲಿಕ್‌ ಮಾಡಿ ►https://whatsapp.com/channel/0029VaA8ju86LwHn9OQpEq28

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News