×
Ad

ವಾಟ್ಸಪ್ ಗ್ರಾಹಕರಿಗೆ ಹೊಸ ಫೀಚರ್‌ಗಳನ್ನು ಒದಗಿಸಿದ ಮೆಟಾ

Update: 2025-04-11 19:19 IST

ಸಾಂದರ್ಭಿಕ ಚಿತ್ರ | PC : freepik.com

ತನ್ನ IOS (ಐಒಎಸ್) ಹಾಗೂ ಆಂಡ್ರಾಯಿಡ್ ಗ್ರಾಹಕರಿಗೆ ವಾಟ್ಸಪ್ ಹೊಸ ಅಪ್ಡೇಟ್ ಗಳನ್ನು ನೀಡಿದ್ದು, ಚಾಟ್ಸ್, ವಾಯ್ಸ್ ಹಾಗೂ ವಿಡಿಯೋ ಕರೆ ಮತ್ತು ಚಾನೆಲ್ ಗಳಲ್ಲಿ ನವೀನ ಮಾದರಿಯ ಸೇವೆಯನ್ನು ಪರಿಚಯಿಸಿದೆ.

ಗ್ರೂಪುಗಳಲ್ಲಿರುವ ಸದಸ್ಯರಲ್ಲಿ ಆನ್ಲೈನ್ ನಲ್ಲಿ ಇರುವವರನ್ನು ಗುರುತಿಸುವ ಸಲುವಾಗಿ ʼonlineʼ ಸೂಚನೆಯನ್ನು ಪರಿಚಯಿಸಲಾಗಿದ್ದು, ಇದು ಆನ್ಲೈನ್ ನಲ್ಲಿರುವ ಗ್ರೂಪಿನ ಇತರೆ ಸದಸ್ಯರನ್ನು ರಿಯಲ್ ಟೈಮ್ ನಲ್ಲಿ ತೋರಿಸಿಕೊಡುತ್ತದೆ.

ಐಒಎಸ್ ಫೋನ್ ಗಳಲ್ಲಿ ಪಿಂಚ್ ಟು ಝೂಮ್ ಹಾಗೂ ಡಾಕ್ಯುಮೆಂಟ್ ಗಳನ್ನು ಸ್ಕ್ಯಾನ್ ಮಾಡುವ ಸೇವೆಯಲ್ಲಿ ನಾವಿನ್ಯತೆಯನ್ನು ನೀಡಿದೆ.

ನೊಟಿಫಿಕೇಶನ್ ವ್ಯವಸ್ಥೆಯಲ್ಲೂ ಬದಲಾವಣೆಗಳನ್ನು ತರಲಾಗಿದ್ದು, ಕೇವಲ ಹೈಲೈಟ್, ಮೆನ್ಷನ್ ಹಾಗೂ ರಿಪ್ಲೈಗಳ ನೊಟಿಫಿಕೇಶನ್ ಗೆ ಮಾತ್ರ ಸೀಮಿತಗೊಳಿಸಲು ಅವಕಾಶ ನೀಡಲಾಗಿದೆ.

ಇದಲ್ಲದೆ, 60 ಸೆಕೆಂಡ್ ವರೆಗೂ ವಿಡಿಯೋ ನೋಟ್ಸ್ ಗಳನ್ನೂ ಕಳುಹಿಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News