×
Ad

ಮಿಝೋರಾಂ ವಿಧಾನಸಭೆಯಲ್ಲಿ ʼಭಿಕ್ಷಾಟನೆ ನಿಷೇಧ ಮಸೂದೆʼ ಅಂಗೀಕಾರ

Update: 2025-08-28 10:54 IST

ಸಾಂದರ್ಭಿಕ ಚಿತ್ರ

ಐಝ್ವಾಲ್ : ವಿರೋಧ ಪಕ್ಷಗಳ ವಿರೋಧದ ಮಧ್ಯೆಯೂ ಮಿಝೋರಾಂ ವಿಧಾನಸಭೆಯಲ್ಲಿ ʼಭಿಕ್ಷಾಟನೆ ನಿಷೇಧ ಮಸೂದೆ–2025’ಯನ್ನು ಅಂಗೀಕರಿಸಲಾಗಿದೆ.

ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಾಲ್ರಿನ್‌ಪುಯಿ ಅವರು ವಿಧಾನಸಭೆಯಲ್ಲಿ ಭಿಕ್ಷಾಟನೆ ನಿಷೇಧ ಮಸೂದೆ ಮಂಡಿಸಿದ್ದಾರೆ. ರಾಜ್ಯದಲ್ಲಿ ಭಿಕ್ಷಾಟನೆ ನಿಷೇಧಿಸುವುದು ಮಾತ್ರವಲ್ಲದೆ, ಸುಸ್ಥಿರ ಜೀವನೋಪಾಯದ ಆಯ್ಕೆಗಳನ್ನು ಕಲ್ಪಿಸುವ ಮೂಲಕ ಭಿಕ್ಷುಕರಿಗೆ ನೆರವು ಮತ್ತು ಪುನರ್ವಸತಿಯನ್ನು ಕಲ್ಪಿಸುವುದು ಈ ಮಸೂದೆಯ ಮುಖ್ಯ ಉದ್ದೇಶವಾಗಿದೆ’ ಎಂದು ಹೇಳಿದ್ದಾರೆ.

ಮಿಝೋರಾಂನಲ್ಲಿ ಭಿಕ್ಷಾಟನೆ ಹೆಚ್ಚುತ್ತಿರುವ ಬಗ್ಗೆ ಕಳವಳಗಳಿವೆ. ಆದರೆ, ಚರ್ಚ್‌ಗಳು ಮತ್ತು ಎನ್‌ಜಿಒಗಳ ಒಳಗೊಳ್ಳುವಿಕೆ ಮತ್ತು ಸರಕಾರದ ಕಲ್ಯಾಣ ಕ್ರಮಗಳಿಂದ ರಾಜ್ಯದಲ್ಲಿ ಭಿಕ್ಷುಕರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬುದು ಸಮಾಧಾನಕರ ಸಂಗತಿ ಎಂದು ಹೇಳಿದರು.

ರೈಲುಗಳ ಮೂಲಕ ಹೊರರಾಜ್ಯಗಳಿಂದ ಕೂಡ ಭಿಕ್ಷುಕರ ರಾಜ್ಯಕ್ಕೆ ಬರುತ್ತಿರುವ ಸಾಧ್ಯತೆ ಇದೆ. ಭಿಕ್ಷುಕರನ್ನು ಮೊದಲು ಶಿಬಿರಗಳಲ್ಲಿ ಇರಿಸಲಾಗುತ್ತದೆ. ಬಳಿಕ ಅವರನ್ನು ಮನೆಗಳಿಗೆ ಅಥವಾ ಅವರವರ ರಾಜ್ಯಗಳಿಗೆ ಕಳುಹಿಸಲಾಗುವುದು ಎಂದು ಹೇಳಿದ್ದಾರೆ.

ʼಈ ಮಸೂದೆಯು ಕ್ರೈಸ್ತ ಸಮುದಾಯದ ನಂಬಿಕೆಗೆ ವಿರುದ್ಧವಾಗಿದ್ದು, ರಾಜ್ಯಕ್ಕೆ ಕೆಟ್ಟ ಹೆಸರು ತರುತ್ತದೆ’ ಎಂದು ಎಂಎನ್ಎಫ್ ನಾಯಕ ಲಾಲ್ಚಂದಮ ರಾಲ್ಟೆ ಸೇರಿದಂತೆ ವಿಪಕ್ಷಗಳ ನಾಯಕರು ಮಸೂದೆಗೆ ವಿರೋಧವನ್ನು ವ್ಯಕ್ತಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News