×
Ad

ವಕ್ಫ್ ಭೂಮಿಯನ್ನು ಸಮುದಾಯದ ಪ್ರಯೋಜನಕ್ಕೆ ಬಳಸಿದ್ದರೆ ಮುಸ್ಲಿಂ ಯುವಕರು ಪಂಕ್ಚರ್‌ ಹಾಕುತ್ತಿರಲಿಲ್ಲ: ಪ್ರಧಾನಿ ಮೋದಿ

Update: 2025-04-15 10:45 IST

Photo | @BJP4India/X

ಹೊಸದಿಲ್ಲಿ : ʼವಕ್ಫ್ ಭೂಮಿಯನ್ನು ಸಮುದಾಯದ ಪ್ರಯೋಜನಕ್ಕಾಗಿ ಸರಿಯಾಗಿ ಬಳಸಿದ್ದರೆ ಮುಸ್ಲಿಂ ಯುವಕರು ಪಂಕ್ಚರ್‌ಗಳನ್ನು ಸರಿಪಡಿಸಬೇಕಾಗಿರಲಿಲ್ಲʼ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಹರ್ಯಾಣದ ಹಿಸಾರ್‌ನಲ್ಲಿ ಜಿಲ್ಲಾ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಟ್ಟಡದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಕ್ಫ್ ಹೆಸರಿನಲ್ಲಿ ಲಕ್ಷಾಂತರ ಹೆಕ್ಟೇರ್ ಭೂಮಿ ಇದೆ. ವಕ್ಫ್ ಆಸ್ತಿಗಳ ಪ್ರಯೋಜನಗಳನ್ನು ಬಡವರಿಗೆ ನೀಡಿದ್ದರೆ, ಅದು ಅವರಿಗೆ ಸಹಾಯವಾಗುತ್ತಿತ್ತು. ಆದರೆ, ಭೂ ಮಾಫಿಯಾ ವಕ್ಫ್ ಆಸ್ತಿಗಳಿಂದ ಲಾಭ ಪಡೆದಿದೆ ಎಂದು ಆರೋಪಿಸಿದರು.

ಈ ತಿದ್ದುಪಡಿ ಮಾಡಿದ ವಕ್ಫ್ ಕಾನೂನಿನೊಂದಿಗೆ ಬಡವರ ಲೂಟಿ ನಿಲ್ಲುತ್ತದೆ. ಹೊಸ ವಕ್ಫ್ ಕಾನೂನಿನಡಿಯಲ್ಲಿ, ಯಾವುದೇ ಆದಿವಾಸಿಗಳಿಗೆ ಸೇರಿದ ಭೂಮಿ ಅಥವಾ ಆಸ್ತಿಯನ್ನು ವಕ್ಫ್ ಮಂಡಳಿ ಮುಟ್ಟಲು ಸಾಧ್ಯವಿಲ್ಲ. ಬಡ ಮುಸ್ಲಿಮರು ಮತ್ತು ಪಸ್ಮಾಂಡ ಮುಸ್ಲಿಮರು ತಮ್ಮ ಹಕ್ಕುಗಳನ್ನು ಪಡೆಯುತ್ತಾರೆ. ಇದು ನಿಜವಾದ ಸಾಮಾಜಿಕ ನ್ಯಾಯ ಎಂದು ಹೇಳಿದರು.

ವಕ್ಫ್ ಆಸ್ತಿ ಇಸ್ಲಾಮಿಕ್ ಕಾನೂನಿನಡಿಯಲ್ಲಿ ಧಾರ್ಮಿಕ, ಶೈಕ್ಷಣಿಕ ಅಥವಾ ದತ್ತಿ ಉದ್ದೇಶಕ್ಕಾಗಿ ಮೀಸಲಾಗಿರುವ ಆಸ್ತಿ. ಪ್ರತಿಯೊಂದು ರಾಜ್ಯವು ವಕ್ಫ್ ಮಂಡಳಿಯನ್ನು ಹೊಂದಿದ್ದು, ಅದು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವ, ಹಿಡಿದಿಟ್ಟುಕೊಳ್ಳುವ ಮತ್ತು ವರ್ಗಾಯಿಸುವ ಅಧಿಕಾರವನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News