ಮುಂಬೈ ನಗರ ಪಾಲಿಕೆ ಚುನಾವಣಾ ಫಲಿತಾಂಶ | 50ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಮುನ್ನಡೆ
ಖಾತೆ ತೆರೆದ ಕಾಂಗ್ರೆಸ್
Update: 2026-01-16 12:15 IST
File Photo: PTI
ಮುಂಬೈ: ಶಿವಸೇನೆಯ ಅಭ್ಯರ್ಥಿ ಲಕ್ಷ್ಮಿ ಬಾಗ್ ರನ್ನು ಮಣಿಸುವ ಮೂಲಕ, ಕಾಂಗ್ರೆಸ್ ಅಭ್ಯರ್ಥಿ ಆಶಾ ಕಾಳೆ ಗೆಲುವು ಸಾಧಿಸಿದ್ದಾರೆ. ಆ ಮೂಲಕ, ಶುಕ್ರವಾರ ನಡೆಯುತ್ತಿರುವ ಬೃಹತ್ ಮುಂಬೈ ನಗರ ಪಾಲಿಕೆ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಮೊದಲ ಗೆಲುವು ದಾಖಲಿಸಿದೆ.
ಮತ ಎಣಿಕೆ ಕೇಂದ್ರಗಳಿಂದ ಫಲಿತಾಂಶಗಳು ಹೊರಬೀಳತೊಡಗಿದ್ದು, ಬಿಜೆಪಿ-ಶಿವಸೇನೆ ಮೈತ್ರಿಕೂಟವು ಮುಂಬೈ ನಗರದಾದ್ಯಂತ 52 ವಾರ್ಡ್ ಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ, ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇದಕ್ಕೆ ವ್ಯತಿರಿಕ್ತವಾಗಿ ವಿರೋಧ ಪಕ್ಷಗಳಾದ ಶಿವಸೇನೆ (ಉದ್ಧವ್ ಬಣ), ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ ಹಾಗೂ ಎನ್ಸಿಪಿ (ಶರದ್ ಬಣ) ಮೈತ್ರಿಕೂಟ ಸಾಕಷ್ಟು ಹಿಂದೆ ಬಿದ್ದಿದ್ದು, ಆರಂಭಿಕ ಮತ ಎಣಿಕೆಯಲ್ಲಿ ಕೇವಲ 31 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ.