×
Ad

ಮುಂಬೈ | ಎಬಿವಿಪಿ ವಿರೋಧದ ಬಳಿಕ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಸ್ಟಾನ್ ಸ್ವಾಮಿ ಸ್ಮರಣಾರ್ಥ ಉಪನ್ಯಾಸ ರದ್ದು!

Update: 2025-08-09 16:30 IST

PC : St. Xavier's College, Mumbai \ FACEBOOK


ಮುಂಬೈ : ಎಬಿವಿಪಿ ಪ್ರತಿಭಟನೆಯ ನಂತರ ಮುಂಬೈನ ಸೇಂಟ್ ಕ್ಸೇವಿಯರ್ಸ್ ಕಾಲೇಜು ಶನಿವಾರ ನಡೆಯಬೇಕಿದ್ದ ವಾರ್ಷಿಕ ಸ್ಟಾನ್ ಸ್ವಾಮಿ ಸ್ಮರಣಾರ್ಥ ಉಪನ್ಯಾಸವನ್ನು ರದ್ದುಗೊಳಿಸಿದೆ ಎಂದು The Free Press Journal ವರದಿ ಮಾಡಿದೆ.

"ಜೀವನೋಪಾಯಕ್ಕಾಗಿ ವಲಸೆ: ಸಂಕಷ್ಟಗಳ ನಡುವೆ ಭರವಸೆ"( Migration for Livelihood: Hope amidst Miseries) ಎಂಬ ಶೀರ್ಷಿಕೆಯ ಈ ಉಪನ್ಯಾಸವನ್ನು ರೋಮ್‌ನ ಗ್ರೆಗೋರಿಯನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಫಾದರ್ ಪ್ರೇಮ್ ಕ್ಸಾಲ್ಕ್ಸೊ ಅವರು ನೀಡಬೇಕಿತ್ತು.

ಮಂಗಳವಾರ ಎಬಿವಿಪಿ ಕಾರ್ಯಕರ್ತರು ಸೇಂಟ್ ಕ್ಸೇವಿಯರ್ಸ್ ಕಾಲೇಜಿನ ಪ್ರಾಂಶುಪಾಲರನ್ನು ಭೇಟಿ ಮಾಡಿ ಉಪನ್ಯಾಸವನ್ನು ತಕ್ಷಣ ರದ್ದುಗೊಳಿಸುವಂತೆ ಒತ್ತಾಯಿಸಿ ಪತ್ರವನ್ನು ಸಲ್ಲಿಸಿದ್ದರು.

ʼಎಲ್ಗರ್ ಪರಿಷತ್, ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ನಿಷೇಧಿತ ಮಾವೋವಾದಿ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಯುಎಪಿಎ ಆರೋಪಗಳನ್ನು ಎದುರಿಸುತ್ತಿದ್ದ ಸ್ಟಾನ್ ಸ್ವಾಮಿ ಅವರ ಸ್ಮರಣಾರ್ಥ ಉಪನ್ಯಾಸವನ್ನು ಆಯೋಜಿಸುವುದು ಕ್ಯಾಂಪಸ್‌ನ ಲ್ಲಿ ನಗರ ನಕ್ಸಲಿಸಂ ಅನ್ನು ವೈಭವೀಕರಿಸುವ ಪ್ರಯತ್ನʼ ಎಂದು ಎಬಿವಿಪಿ ಆರೋಪಿಸಿದೆ.

2018ರಲ್ಲಿ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮರಾಠಾ ಮತ್ತು ದಲಿತ ಗುಂಪುಗಳ ನಡುವೆ ಜಾತಿ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪ ಹೊರಿಸಲ್ಪಟ್ಟ 16 ವಕೀಲರು ಮತ್ತು ಕಾರ್ಯಕರ್ತರ ಗುಂಪಿನಲ್ಲಿ ಸ್ವಾಮಿ ಕೂಡ ಇದ್ದರು. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. 2021ರ ಜುಲೈ 5ರಂದು ಅವರು ನಿಧನರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News