×
Ad

ಬಿʼಹಾರ್ʼ: ಹರ್ ಬಾರ್ ನಿತೀಶ್ ಕುಮಾರ್

ಎನ್‌ ಡಿ ಎ ಒಕ್ಕೂಟಕ್ಕೆ ಭರ್ಜರಿ ಬಹುಮತ

Update: 2025-11-14 16:17 IST

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಸ್ಪಷ್ಟ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈಗಾಗಲೇ 208 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿರುವುದರಿಂದ ಅಧಿಕಾರವು ಮತ್ತೊಮ್ಮೆ ಎನ್‌ಡಿಎ ಪಾಲಾಗಲಿದೆ.

ಬಿಜೆಪಿ 95 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿ ಬೃಹತ್ ಜಯದತ್ತ ಮುನ್ನುಗ್ಗುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು 84 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದು, ಮೈತ್ರಿ ಪಕ್ಷಗಳಾದ ಚಿರಾಗ್ ಪಾಸ್ವಾನ್ ಅವರ ಎಲ್‌ಜೆಪಿ–ಆರ್‌ವಿ 20, ಜಿತನ್ ರಾಮ್ ಮಾಂಝಿ ಅವರ HAM 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

ಮಹಾಘಟಬಂಧನ್ ತೀವ್ರ ಹಿನ್ನಡೆ ಎದುರಿಸಿದ್ದು, ಒಟ್ಟು 30 ಸ್ಥಾನಗಳಿಗಿಂತ ಕೆಳಗೆ ಕುಸಿದಿದೆ. ಆರ್‌ಜೆಡಿ 24, ಕಾಂಗ್ರೆಸ್ 2, CPI(ML) ಮತ್ತು CPM ತಲಾ ಒಂದು ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ರಾಜ್ಯದಲ್ಲಿ ಚುನಾವಣಾ ಫಲಿತಾಂಶವು ಸಂಪೂರ್ಣ ಏಕಪಕ್ಷೀಯ ರೂಪ ಪಡೆದುಕೊಂಡಿದ್ದು, ಎನ್‌ಡಿಎ ಪ್ರತಿಕ್ಷಣಕ್ಕೂ ತನ್ನ ಅಂತರವನ್ನು ವಿಸ್ತರಿಸುತ್ತಿದೆ. ಚುನಾವಣೆಗೆ ಪರ್ಯಾಯ ಶಕ್ತಿ ಎಂದು ಘೋಷಿಸಿಕೊಂಡಿದ್ದ ಪ್ರಶಾಂತ್ ಕಿಶೋರ್ ಅವರ ಜನ್ ಸೂರಾಜ್ ಪಕ್ಷವು ಮತದಾರರ ಗಮನ ಸೆಳೆಯಲು ವಿಫಲವಾಗಿದೆ.

ವಿರೋಧಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಅವರಿಗೆ ರಾಘೋಪುರದಲ್ಲಿಯೇ ಹಿನ್ನಡೆಯಾಗಿದೆ. ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ 4,500 ಮತಗಳ ಅಂತರದಿಂದ ಮುನ್ನಡೆ ಸಾಧಿಸಿರುವುದು ಆರ್‌ಜೆಡಿಗೆ ಆಘಾತ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News