×
Ad

ನೇತಾಜಿ ಸುಭಾಶ್ ಚಂದ್ರ ಬೋಸರನ್ನು ಸಾವರ್ಕರ್ ರೊಂದಿಗೆ ಹೋಲಿಸಿದ ರಣದೀಪ್ ಹೂಡಾರನ್ನು ತರಾಟೆಗೆ ತೆಗೆದುಕೊಂಡ ನೇತಾಜಿ ಮೊಮ್ಮಗ

Update: 2024-03-05 21:14 IST

ವೀರ್ ಸಾವರ್ಕರ್ | Photo: @zoo_bear

ಹೊಸದಿಲ್ಲಿ: ರಣದೀಪ್ ಹೂಡಾ ನಿರ್ದೇಶನದ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾವರ್ಕರ್ ಅವರನ್ನು ನೇತಾಜಿ ಸುಭಾಶ್ ಚಂದ್ರ ಬೋಸ್ ಅವರೊಂದಿಗೆ ಹೋಲಿಸಿರುವುದಕ್ಕೆ ಅವರ ಮರಿ ಮೊಮ್ಮಗ ಚಂದ್ರ ಕುಮಾರ್ ಬೋಸ್ ನಿರ್ದೇಶಕ ರಣದೀಪ್ ಹೂಡಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಚಂದ್ರ ಕುಮಾರ್ ಬೋಸ್, “ಸಾವರ್ಕರ್ ಕುರಿತು ಚಿತ್ರ ಮಾಡುವ ನಿಮ್ಮ ಪ್ರಯತ್ನವನ್ನು ಅಭಿನಂದಿಸುತ್ತೇನೆ. ಆದರೆ, ನೈಜ ವ್ಯಕ್ತಿತ್ವವನ್ನು ಬಿಂಬಿಸುವುದು ತುಂಬಾ ಮುಖ್ಯವಾಗಿದೆ.

ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಹೆಸರಿನೊಂದಿಗೆ ಸಾವರ್ಕರ್ ಹೆಸರನ್ನು ತಳಕು ಹಾಕುವುದರಿಂದ ದೂರ ಉಳಿಯಿರಿ. ನೇತಾಜಿ ಎಲ್ಲರನ್ನೂ ಒಳಗೊಳ್ಳುವ ಜಾತ್ಯತೀತ ನಾಯಕರಾಗಿದ್ದರು ಮತ್ತು ದೇಶಪ್ರೇಮಿಗಳಲ್ಲೇ ದೊಡ್ಡ ದೇಶಪ್ರೇಮಿಯಾಗಿದ್ದರು” ಎಂದು ಕಿವಿಮಾತು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News