×
Ad

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಫೋಟೋ, ವೀಡಿಯೊಗಳಿದ್ದರೆ ಸಂಪರ್ಕಿಸುವಂತೆ NIA ಮನವಿ

Update: 2025-05-07 20:23 IST

Photo | ಸಾಂದರ್ಭಿಕ ಚಿತ್ರ 

ಹೊಸದಿಲ್ಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಯಾವುದೇ ಮಾಹಿತಿ, ಫೋಟೊಗಳು ಅಥವಾ ವೀಡಿಯೊಗಳಿದ್ದರೆ ತಕ್ಷಣ ಸಂಪರ್ಕಿಸುವಂತೆ ಎಲ್ಲಾ ಪ್ರವಾಸಿಗರು ಮತ್ತು ಸ್ಥಳೀಯರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಮನವಿ ಮಾಡಿಕೊಂಡಿದೆ.

ಪಹಲ್ಗಾಮ್ ಭಯೋತ್ಪದನಾ ದಾಳಿ ಕುರಿತು ಎನ್ಐಎ ತನಿಖೆ ನಡೆಯುತ್ತಿದೆ. ʼಈಗಾಗಲೇ ನಮ್ಮ ಬಳಿ ಹಲವು ಫೋಟೊಗಳು ಮತ್ತು ವೀಡಿಯೊಗಳಿವೆ. ಅವುಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರವಾಸಿಗರು ಅಥವಾ ಇತರರು ಆಕಸ್ಮಿಕವಾಗಿ ನೋಡಿದ, ಕೇಳಿರುವ ಅಥವಾ ಕ್ಲಿಕ್ ಮಾಡಿರುವ ಯಾವುದೇ ಪೋಟೊ, ವೀಡಿಯೊಗಳು ಪ್ರವಾಸಿಗರ ಮೇಲೆ ನಡೆದ ದಾಳಿಯನ್ನು ಬಯಲಿಗೆಳೆಯಲು ಸಹಾಯ ಮಾಡಬಹುದುʼ ಎಂದು ಎನ್ಐಎ ಹೇಳಿದೆ.

ಮಾನವೀಯತೆಯ ವಿರುದ್ಧದ ಈ ಭೀಕರ ಅಪರಾಧ ಕೃತ್ಯದ ಕುರಿತ ತನಿಖೆಯಲ್ಲಿ ಯಾವುದೇ ಉಪಯುಕ್ತ ಮಾಹಿತಿ ಅಥವಾ ಪುರಾವೆಗಳು ತಪ್ಪಿಹೋಗದಂತೆ ನೋಡಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ NIA ಹೇಳಿಕೆಯಲ್ಲಿ ತಿಳಿಸಿದೆ.

ನಿಮ್ಮಲ್ಲಿ ಪಹಲ್ಗಾಮ್ ದಾಳಿಗೆ ಸಂಬಂಧಿಸಿದ ಮಾಹಿತಿಗಳಿದ್ದರೆ 96-54-958-816 ಅಥವಾ 011- 24368800 ಸಂಖ್ಯೆಗೆ ಕರೆ ಮಾಡಿ ತಿಳಿಸುವಂತೆ ಎನ್ಐಎ ಮನವಿ ಮಾಡಿಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News