×
Ad

ಕೇಜ್ರಿವಾಲ್ ಮನೆಯಲ್ಲಿ ಸಿಕ್ಕಿದ್ದು ಕೇವಲ 70,000 ಸಾವಿರ ರೂ. : ಆಪ್‌ ನಾಯಕ ಸೌರಭ್ ಭಾರದ್ವಾಜ್

Update: 2024-03-22 05:11 IST

ಸೌರಭ್ ಭಾರದ್ವಾಜ್

ಹೊಸದಿಲ್ಲಿ: "ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಪ್ರತಿಯೊಂದು ಮೂಲೆಯನ್ನು ಈಡಿ ಶೋಧಿಸಿತು. ಅವರಿಗೆ ಸಿಕ್ಕಿದ್ದು, ಕೇವಲ 70,000 ರೂ. ಹಣ ಮಾತ್ರ. ಅದನ್ನು ಈಡಿ ಹಿಂದಿರುಗಿಸಿದೆ" ಎಂದು ದಿಲ್ಲಿ ಸಚಿವ ಮತ್ತು ಎಎಪಿ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

ಈ ಸಂದರ್ಭ ಕೇಜ್ರಿವಾಲ್ ಅವರು ತಮ್ಮ ಮೊಬೈಲ್ ಅನ್ನು ಕೇಂದ್ರ ಏಜೆನ್ಸಿಗೆ ಹಸ್ತಾಂತರಿಸಿದರು ಎನ್ನಲಾಗಿದೆ

"ಇಲ್ಲಿಯವರೆಗೆ, ಅವರು ಇಬ್ಬರು ಮುಖ್ಯಮಂತ್ರಿಗಳನ್ನು ಬಂಧಿಸಿದ್ದಾರೆ ಮತ್ತು ಅವರು ಇನ್ನೂ ಹೆಚ್ಚಿನ ಮುಖ್ಯಮಂತ್ರಿಗಳನ್ನು ಬಂಧಿಸುವ ಸಾಧ್ಯತೆಯಿದೆ" ಎಂದು ಸೌರಭ್ ಹೇಳಿದರು.

ಶುಕ್ರವಾರ ಕೇಜ್ರಿವಾಲ್ ಬಂಧನದ ವಿರುದ್ಧ ಆಪ್ ಪ್ರತಿಭಟನೆ ನಡೆಸಲಿದೆ.

"ಶುಕ್ರವಾರ ಬೆಳಗ್ಗೆ 10 ಗಂಟೆಗೆ ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಈಡಿ ಬಂಧಿಸಿರುವ ಕುರಿತು ನಾವು ಬಿಜೆಪಿ ಪಕ್ಷದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ" ಎಂದು ದಿಲ್ಲಿ ಸಚಿವ ಮತ್ತು ಎಎಪಿ ನಾಯಕ ಗೋಪಾಲ್ ರೈ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News