×
Ad

ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಂಚಾಯತ್ ಅಧ್ಯಕ್ಷೆ ವಿರುದ್ಧ ಸಿಪಿಎಂ ಕ್ರಮ

Update: 2025-09-12 19:10 IST

Credit: PTI 

ಕೋಝಿಕ್ಕೋಡ್ : ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೇಸರಿ ಧ್ವಜ ಹಿಡಿದ ಭಾರತಮಾತೆಯ ಪೋಟೊ ಮುಂದೆ ದೀಪ ಹಚ್ಚಿದ ಸಿಪಿಎಂ ನಾಯಕಿಯ ವಿರುದ್ಧ ಸಿಪಿಎಂ ಪಕ್ಷವು ಕ್ರಮವನ್ನು ಕೈಗೊಂಡಿದೆ.

ತಲಕ್ಕುಳತ್ತೂರು ಪಂಚಾಯತ್ ಅಧ್ಯಕ್ಷೆ ಕೆ.ಟಿ ಪ್ರಮೀಳಾ ವಿರುದ್ಧ ಸಿಪಿಎಂ ಕ್ರಮ ಕೈಗೊಂಡಿದೆ. ಪ್ರಮೀಳಾ ಅವರನ್ನು ಸ್ಥಳೀಯ ಸಮಿತಿಯಿಂದ ಶಾಖಾ ಸಮಿತಿಗೆ ಸಿಪಿಎಂ ಹಿಂಬಡ್ತಿಗೊಳಿಸಿದೆ.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸಂಸದ ಸದಾನಂದನ್ ಕೂಡ ಭಾಗವಹಿಸಿದ್ದರು.

ಆರೆಸ್ಸೆಸ್‌ನ ಸೇವಾ ಭಾರತಿಯ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ 3ರಂದು ಘಟನೆ ನಡೆದಿದೆ. ಕಾರ್ಯಕ್ರಮದಲ್ಲಿ ಪ್ರಮೀಳಾ ಅವರು ಕೇಸರಿ ಧ್ವಜ ಹಿಡಿದ ಭಾರತಮಾತೆಯ ಫೋಟೊ ಮುಂದೆ ದೀಪ ಬೆಳಗಿಸಿದ್ದರು.

ಭಾರತಮಾತೆಯ ಪೋಟೊ ಇರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇರಳದ ಕೆಲ ಸಚಿವರು ಇತ್ತೀಚೆಗೆ ಹಿಂದೇಟು ಹಾಕಿದ್ದರು. ಈ ಮಧ್ಯೆ ಈ ಬೆಳವಣಿಗೆ ಉಂಟಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News